ಮಹಾರಾಷ್ಟ್ರ : ವಿಧಾನಸಭೆ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು | ಶಿಂಧೆ ಬಣಕ್ಕೆ ಮೊದಲನೇ ಜಯ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಹೊಸ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, 164 ಮತ ಪಡೆದ ಬಿಜೆಪಿ ಶಾಸಕ ರಾಹುಲ್​ ನಾರ್ವೇಕರ್​ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಏಕನಾಥ್​ ಶಿಂದೆ ಮೊದಲ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

 

ಮಹಾ’ ಅಧಿವೇಶನದ ಮೊದಲ ದಿನವೇ ಸ್ಪೀಕರ್ ಎಲೆಕ್ಷನ್ ನಡೆದಿದ್ದು, ಸ್ಪೀಕರ್​ ಎಲೆಕ್ಷನ್​​ನ ವೋಟಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅಧಿವೇಶನದಲ್ಲೂ ಶಿವಸೇನಾ ವರ್ಸಸ್ ಶಿಂಧೆ ಫೈಟ್ ನಡೆದಿದ್ದು, ಮಹಾರಾಷ್ಟ್ರ ಸ್ಪೀಕರ್ ಎಲೆಕ್ಷನ್​​ನಲ್ಲಿ ರಾಹುಲ್ ನಾರ್ವೆಕರ್​ಗೆ ಜಯ ಸಾಧಿಸಿದ್ದಾರೆ. ಮಹಾರಾಷ್ಟ್ರ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೆಕರ್ ಆಯ್ಕೆ ಯಾಗಿದ್ದು, ಬಿಜೆಪಿಯ ರಾಹುಲ್ ನಾರ್ವೆಕರ್​ಗೆ ಒಟ್ಟು 164 ಮತಗಳು ಬಂದಿದ್ದು,ರಾಹುಲ್ ನಾರ್ವೆಕರ್ ಎದುರಾಳಿ ರಾಜನ್ ಸಾಲ್ವಿಗೆ 105 ಮತಗಳು ಬಂದಿದೆ. ಸ್ಪೀಕರ್ ಎಲೆಕ್ಷನ್​​ ಫೈಟ್​​ನಲ್ಲಿ ರಾಹುಲ್​​ ನಾರ್ವೆಕರ್​ಗೆ ಜಯ ಸಾಧಿಸಿದ್ದಾರೆ.

Leave A Reply

Your email address will not be published.