2024 ರ ಲೋಕಸಭೆ ಚುನಾವಣೆಯಲ್ಲಿ ‘ಕುಟುಂಬ ರಾಜಕಾರಣ ಮುಕ್ತ ಭಾರತ’ BJP ಯ ಚುನಾವಣಾ ವಿಷ್ಯ ಆಗತ್ತಾ ?
ನವದೆಹಲಿ: ಪ್ರಜಾಪ್ರಭುತ್ವ ಸಿದ್ಧಾಂತ ಪಾಲನೆಯಾಗದಿರಲು, ಪಕ್ಷಗಳು ರಾಜಕಾರಣದಿಂದಲೇ ತುಂಬಿ ಹೋಗಿರುವುದೇ ಕಾರಣವಾಗಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಕುಟುಂಬ ರಾಜಕಾರಣಮುಕ್ತ ಭಾರತ ಎಂಬ ವಿಷಯವನ್ನೇ
ಚುನಾವಣಾ ವಿಷಯವನ್ನಾಗಿ ಮಾಡಬೇಕೆಂಬ ಉದ್ದೇಶ ಹೊಂದಿದೆ ಎಂಬ ಚರ್ಚೆಗಳು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಡೆಯುತ್ತಿದೆ.
ಪ್ರಧಾನಿ ಮೋದಿ ಅವರೂ ಈ ಬಗ್ಗೆ ಅನೇಕ ವೇದಿಕೆಗಳಲ್ಲಿ
ಮಾತನಾಡಿದ್ದು, ಪತ್ರಿಕೆಗಳಲ್ಲಿ ಲೇಖನ ಮುಖಾಂತರ ಹಾಗೂ ವಿವಿಧ ಕಡೆ ಮುಖಂಡರ ಮೂಲಕ ಕುಟುಂಬ ರಾಜಕಾರಣದಿಂದ ಭಾರತವನ್ನು ಮುಕ್ತಗೊಳಿಸು
ಬಗ್ಗೆ ಭಾಷಣಗಳನ್ನು ಮಾಡಲು ನಿರ್ಧರಿಸಲಾಗಿದೆ. ಇದರ ನಡುವೆ ಲೋಕಸಭೆ ಚುನಾವಣೆಗೆ ದಕ್ಷಿಣ ಭಾರತದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿರುವ ಬಿಜೆಪಿ, ತೆಲಂಗಾಣದಲ್ಲಿ ಕೆಸಿಆರ್ ಆಡಳಿತ ಗುರಿಯಾಗಿಸಿ, ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.
2024ರ ಲೋಕಸಭೆ ಚುನಾವಣೆಗೆ ಈಗಾಗಲೇ ಪೂರ್ವ ತಯಾರಿ ನಡೆಸುತ್ತಿರುವ ಬಿಜೆಪಿ, ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅಗತ್ಯದ ಸಂದೇಶವನ್ನು, ಸರ್ಕಾರದ ಯೋಜನೆಗಳ 34 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹೈದರಾಬಾದ್ ಹೇಳಿದ್ದಾರೆ.
ಮೂರು ಗಂಟೆಗಳ ಕಾಲ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ನಾಯಕರು ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕನಿಷ್ಠ ಒಂದು ರಾತ್ರಿ ಕಳೆದು, ಜನರೊಂದಿಗೆ ಸಂಪರ್ಕದಲ್ಲಿರಬೇಕು. ಇದಕ್ಕಾಗಿ ನಾಯಕರನ್ನು ಪ್ರವಾಸಕ್ಕೆ ಕಳುಹಿಸುವ ಪಕ್ಷದ ವ್ಯವಸ್ಥೆಗೆ ಪಕ್ಷ ಗಮನಹರಿಸಲಿದೆ. ಬೂತ್‌ಗಳನ್ನು ಬಲಪಡಿಸಲು ಪ್ರತಿ ಬೂತ್‌ನಲ್ಲಿ 200 ಕಾರ್ಯಕರ್ತರು ಮತ್ತು ಮತದಾರರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ಗುಂಪುಗಳನ್ನು ರಚಿಸುವುದು. ಎರಡನೆಯದಾಗಿ, ಬೂತ್ ಕಾರ್ಯಕರ್ತರು ಪ್ರಧಾನಿಯವರ ಮನ್ ಕಿ ಬಾತ್ ಪ್ರಸಾರವನ್ನು ಜನರಿಗೆ ತಲುಪಿಸುವುದು. ಜೊತೆಗೆ ಹರ್ ಘರ್ ತಿರಂಗಾ ಎಂಬ ಅಭಿಯಾನ ಪ್ರಾರಂಭಿಸಲು ಪಕ್ಷ ನಿರ್ಧರಿಸಿದ್ದು, 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಪಕ್ಷ ಕೇಳಿಕೊಳ್ಳಲಿದೆ.