ಅಡಕೆ ಬೆಳೆಗಾರರೇ ಗಮನಿಸಿ : ಅಡಕೆಗೆ ಮತ್ತೊಂದು ಹೊಸ ರೋಗದ ಭೀತಿ !
ಅಡಕೆ ಬೆಳೆಗಾರರಿಗೆ ಸಂಕಷ್ಟ ಮುಗಿಯುವ ಹಾಗೇ ಕಾಣಿಸುತ್ತಿಲ್ಲ. ಹಲವಾರು ಮಂದಿ ಅಡಕೆಗೆ ಬರುವ ರೈತರು ಹಳದಿ ರೋಗದಿಂದ ಹೈರಾಣಾಗಿದ್ದಾರೆ. ಈಗ ಇದಕ್ಕೆ ಸೇರ್ಪಡೆಯಾಗಿ ಮಲೆನಾಡಿನ ಅಡಕೆಗೀಗ ಮತ್ತೊಂದು ಹೊಸ ರೋಗದ ಶುರುವಾಗಿದೆ. ಈಗ ನಿಜವಾಗಲೂ ಬೆಳೆಗಾರರಲ್ಲಿ ಆತಂಕ ಎದುರಾಗಿದೆ.
ಮುತ್ತಿನಕೊಪ್ಪ ಗ್ರಾಮದ ಕೃಷಿಕರೊಬ್ಬರ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಅಡಕೆ ಗಿಡಗಳು ಕೆಂಪು ಬಣ್ಣಕ್ಕೆ ತಿರುಗಿ ಸತ್ತು ಹೋಗಿದ್ದು, ಹೊಸ ರೋಗ ಇರುವ ಎಂಬ ಅನುಮಾನ ಬೆಳೆಗಾರರಲ್ಲಿ ಮೂಡಿದೆ. ವರ್ಗೀಸ್ ಅವರು 5.29 ಎಕರೆ ಜಾಗದಲ್ಲಿ 3 ಸಾವಿರ ಅಡಕೆ ಸಸಿಗಳನ್ನು ಬೆಳೆಸಿದ್ದರು. ಇದರಲ್ಲಿ 6 ರಿಂದ 7 ವರ್ಷ ಪ್ರಾಯದ 1000 ಕ್ಕೂ ಹೆಚ್ಚು ಗಿಡಗಳು ಇದ್ದಕ್ಕಿಂತೆ ಕೆಂಪಾಗಿ ಒಣಗಿ ಹೋಗಿವೆ.
ಕಳೆದ 2 ತಿಂಗಳ ಹಿಂದೆ ಅಂದಾಜು 500 ಅಡಕೆ ಗಿಡಗಳು ಒಂದೊಂದಾಗಿ ಕೆಂಪಾಗಿ ಬಾಡಿವೆ. 2 ತಿಂಗಳು ಮುಗಿಯುತ್ತಿದ್ದಂತೆ ಮತ್ತೆ 500 ಗಿಡಗಳು ಸಾಯಲು ಆರಂಭಿಸಿದೆ. ಅಡಕೆ ಗಿಡದ ಹೆಡಲು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದ ಕೃಷಿಕ ವ್ಯಕ್ತಿ ಒಬ್ಬರೇ ಅಲ್ಲ, ಇಡೀ ಮಲೆನಾಡಿನ ಅಡಕೆ ಬೆಳೆಗಾರರು ಆತಂಕಗೊಳ್ಳುವಂತಾಗಿದೆ. ಸತ್ತ ಅಡಕೆ ಗಿಡಗಳನ್ನು ತೆಗೆದು ಮತ್ತೆ ಹೊಸದಾಗಿ ಅಡಕೆ ಗಿಡ ನೆಡುತ್ತಿದ್ದಾರೆ. ಇದು ಯಾವುದೋ ನಿಗೂಢ ಕಾಯಿಲೆ ಇರಬಹುದು ಎಂದು ಅನುಮಾನಿಸಿದ್ದಾರೆ. ಈ ರೋಗದಿಂದಾಗಿ ಅಕ್ಕ ಪಕ್ಕದ ರೈತರಿಗೂ ಭಯ ತರಿಸಿದೆ.
ಅಡಕೆ ಗಿಡ ಕೆಂಪಾಗಿ ಬಾಡುತ್ತಾ ಹೋಗುವುದು, ಯಾವುದೋ ಕೀಟನಾಶಕ ಕಾರಣ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಡಕೆ ತೋಟದ ಮಾಲೀಕ ಯಾವುದೇ ಸ್ಪ್ರೇ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡಿದ್ದು, ತೋಟಗಾರಿಕೆ ಇಲಾಖೆಯವರು ಬಂದು ಪರಿಶೀಲನೆ ಮಾಡಿದ ನಂತರ ಕಾರಣ ಏನೆಂದು ತಿಳಿಯಲಿದೆ.
ಮೇಲ್ನೋಟಕ್ಕೆ ತೋಟಕ್ಕೆ ಹಿಡಿಮುಂಡಿ ರೋಗ ಮತ್ತು ಕೀಟ ಬಾಧೆ ರೋಗ ತಾಗುವ ಲಕ್ಷಣಗಳು ಕಂಡು ಬರುತ್ತಿದೆ. ಗಿಡಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿ, ವರದಿ ಬಂದ ನಂತರ ಸ್ಪಷ್ಟ ಉತ್ತರ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹೇಳಿದ್ದಾರೆ.