ಮದುವೆ, ಲಿವ್ ಇನ್ ರಿಲೇಶನ್ ಬಳಿಕ ಈಗ ನೆಕ್ಲೆಸ್ ಗಾಗಿ ನೆಕ್ ಟು ನೆಕ್ ಫೈಟ್ – ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ !

ಕಳೆದೆರಡು ವಾರಗಳಿಂದ ನಟಿ ಪವಿತ್ರಾ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ ನಡುವಿನ ಪ್ರಕರಣ ಬೀದಿ ಬಂದಿದೆ. ದಿನಕ್ಕೊಂದು ಹೊಸ ಜಗಳ ಹುಟ್ಟಿಕೊಳ್ತಿದೆ.
ತೆಲುಗು ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕಳೆದ ಕೆಲವು ದಿನಗಳಿಂದ ಇವರಿಬ್ಬರ ವಿರುದ್ಧ ಒಂದಲ್ಲಾ ಒಂದು ಆರೋಪ ಮಾಡುತ್ತಲೇ ಇದ್ದಾರೆ.

 

ಮೊದಲಿಗೆ ನರೇಶ್ ಹಾಗೂ ಪ್ರವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಆರೋಪಿಸಿದ್ದರು. ಈಗ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಅದೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪವಿತ್ರಾ ಲೋಕೇಶ್‌ ನಮ್ಮ ಅತ್ತೆಯವರ ಡೈಮಂಡ್ ನೆಕ್ಲೆಸ್ ಅನ್ನು ಧರಿಸಿದ್ದರು. ಅದನ್ನು ಅವರಿಗೆ ಕೊಟ್ಟಿದ್ದು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರವಿತ್ರಾ ಲೋಕೇಶ್ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ರಹಸ್ಯ ಮದುವೆ, ಲಿವ್ ಇನ್ ರಿಲೇಷನ್‌ಶಿಪ್‌ನಿಂದ ಈಗ ಡೈಮಂಡ್ ನೆಕ್ಲೆಸ್‌ವರೆಗೂ ಬಂದು ನಿಂತಿದೆ. ನೆಕ್ ಟು ನೆಕ್ ಫೈಟ್ ಗೆ ನೆಕ್ಲೇಸ್ ಹೊಸ ಕಾರಣ ಆಗಿದೆ.

ಡೈಮಂಡ್ ನೆಕ್ಲೆಸ್ ಪವಿತ್ರಾ ಕೊರಳಿಗೆ ಹೇಗೆ ಬಂತು ?

ಸುದ್ದಿಗೋಷ್ಟಿಯಲ್ಲಿ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಅತ್ತೆ ಧರಿಸುತ್ತಿದ್ದ ಡೈಮಂಡ್ ನಕ್ಲೆಸ್‌ ಬಗ್ಗೆ ಆರೋಪ ಮಾಡಿದ್ದಾರೆ. ‘ನಮ್ಮ ಅತ್ತೆ ಕೆಲವು ಆಭರಣಗಳನ್ನು ಧರಿಸುತ್ತಿದ್ದರು. ಅದನ್ನು ಅವರು ಯಾರಿಗೂ ಕೊಟ್ಟಿರಲಿಲ್ಲ. ಕೊಡುತ್ತಲೂ ಇರಲಿಲ್ಲ. ನಮ್ಮ ಅತ್ತೆ ಆ ಡೈಮಂಡ್ ನೆಕ್ಲೆಸ್ ಅನ್ನೂ ಯಾರಿಗೂ ಕೊಟ್ಟಿರಲಿಲ್ಲ. ಇದು ಪವಿತ್ರಾ ಲೋಕೇಶ್‌ ಅವರ ಕತ್ತಿನಲ್ಲಿ ಕಂಡಿದೆ. ಅದು ಹೇಗೆ ಅವರ ಕೈ ಸೇರಿತು ?’ ಎಂದು ಆರೋಪ ಮಾಡಿದ್ದಾರೆ. ಯಾಕೆಂದರೆ ಪವಿತ್ರ ಕತ್ತಲ್ಲಿ ಅದೇ ಮಾದರಿಯ ಡೈಮಂಡ್ ನೆಕ್ಲೇಸ್ ರಾರಾಜಿಸುತ್ತಿರುವ ಫೋಟೋ ವೈರಲ್ ಆಗಿದೆ.
ನನ್ನ ಅತ್ತೆ ವಿಜಯ ನಿರ್ಮಲಾ ಡೈಮಂಡ್ ನೆಕ್ಲೆಸ್ ಅನ್ನು ಅವರ ಹುಟ್ಟುಹಬ್ಬಕ್ಕೆ ಧರಿಸುತ್ತಿದ್ದರು. ನಾನು ಡೈಮಂಡ್ ನೆಕ್ಲೆಸ್ ಅನ್ನು ನೋಡಿದ್ದೇನೆ. ಪವಿತ್ರಾ ಲೋಕೇಶ್ ಧರಿಸಿದ ಆ ನೆಕ್ಲೆಸ್ ನಮ್ಮ ಅತ್ತೆ ಯವರದ್ದೇ ಎಂದು ಖಡಾಖಂಡಿತವಾಗಿ ಹೇಳಿದ್ದರು. ನನ್ನ ಅತ್ತೆ ಪ್ರತಿ ಹುಟ್ಟುಹಬ್ಬಕ್ಕೆ ಹೊಸ ಆಭರಣ ಖರೀದಿಸುತ್ತಿದ್ದರು. ಆಗ ಈ ಡೈಮಂಡ್‌ ನೆಕ್ಲೆಸ್ ಅನ್ನೂ ಖರೀದಿಸಿದ್ದರು ಎಂದು ರಮ್ಯಾ ರಘುಪತಿ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು.

ನನ್ನ ಅತ್ತೆ ವಿಜಯ ನಿರ್ಮಲಾ 2014ರಲ್ಲಿ ಈ ಡೈಮಂಡ್ ನೆಕ್ಲೆಸ್ ಅನ್ನು ಖರೀದಿ ಮಾಡಿದ್ದರು. ಆ ನೆಕ್ಲೆಸ್ ಅನ್ನು ಅವರು ಧರಿಸಿದ್ದನ್ನು ನಾನೂ ನೋಡಿದ್ದೇನೆ. ಈ ನೆಕ್ಲೆಸ್ ಅನ್ನು ನರೇಶ್ ಅವರೇ ಪವಿತ್ರಾ ಲೋಕೇಶ್‌ ಅವರಿಗೆ ಕೊಟ್ಟಿದ್ದಾರೆ.’ ಎಂದೂ ಕೂಡ ರಮ್ಯಾ ಆರೋಪ ಮಾಡಿದ್ದರು. ಇದಕ್ಕೆ ಪವಿತ್ರಾ ಲೋಕೇಶ್ ಕೂಡ ತಿರುಗೇಟು ನೀಡಿದ್ದಾರೆ.

ರಮ್ಯಾಗೆ ತಿರುಗೇಟು ಕೊಟ್ಟ ಪವಿತ್ರಾ ಲೋಕೇಶ್
ರಮ್ಯಾ ರಘುಪತಿ ಆರೋಪಗಳಿಗೆ ಪವಿತ್ರಾ ಲೋಕೇಶ್ ತಿರುಗೇಟು ನೀಡಿದ್ದಾರೆ. ‘ ಒಂದೇ ತರಹದ ನೆಕ್ಲೆಸ್ ಇನ್ನೊಬ್ಬರ ಬಳಿ ಇರಲು ಸಾಧ್ಯವಿಲ್ಲವೇ? ನನಗೂ ಡೈಮಂಡ್ ನೆಕ್ಲೆಸ್ ಖರೀದಿ ಮಾಡುವ ಶಕ್ತಿಯಿದೆ. ರಮ್ಯಾ ರಘುಪತಿ ಮಾಡುವ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ.’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಆರೋಪ ಪ್ರತ್ಯಾರೋಪಗಳನ್ನು ರಮ್ಯಾ ರಘುಪತಿ ಮಾಡುತ್ತಿದ್ದಾರೆ. ಆದರೆ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಅವರ ಆರೋಪಗಳನ್ನು ತಳ್ಳಿ ಹಾಕುತ್ತಲೇ ಇದ್ದಾರೆ. ಜಡೆ ಎಳೆದಾಡುತ್ತಿದ್ದಾರೆ. ಜಗಳ ನಿಲ್ಲುತ್ತಿಲ್ಲ.

Leave A Reply

Your email address will not be published.