ಬಿಯರ್ ತುಂಬಿದ ಟ್ರಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು : ಬೀರು ಬಾಟಲಿಗಳೊಂದಿಗೆ ಸ್ಥಳೀಯರು ಎಸ್ಕೇಪ್

Share the Article

ಶ್ರೀರಂಗಪಟ್ಟಣ: ತಾಲೂಕಿನ ಗೌರಿಪುರ ಗ್ರಾಮದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಮಿಳುನಾಡು ಮೂಲದ ಎಲುಮಲೈ (60) ಎಂದು ಗುರುತಿಸಲಾಗಿದೆ.

ಬಿಯರ್ ಬಾಟಲಿಗಳನ್ನು ತುಂಬಿಕೊಂಡು ಬೆಂಗಳೂರಿನಿಂದ ಮೈಸೂರು ಕಡೆಗೆ ಲಾರಿ ಹೊರಟಿತ್ತು. ದಾರಿಮಧ್ಯೆ, ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರ ಗ್ರಾಮದ ಬಳಿ ಲಾರಿ ಅಪಘಾತಕ್ಕೆ ಈಡಾಗಿದೆ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗಿದ್ದರೂ, ಲಾರಿಯ ಒಳಗೆ ಬಿಯರ್ ತುಂಬಿದೆ ಎಂದು ಲಾರಿ ಎಂದು ತಿಳಿದ ತಕ್ಷಣ ಸ್ಥಳೀಯರು ಅವಕಾಶವನ್ನು (ಸದು?) ದುರುಪಯೋಗಪಡಿಸಿಕೊಂಡು ಬಾಟಲಿಗಳನ್ನು, ಬಾಚಿಕೊಂಡು ಓಡಿ ಹೋಗಿದ್ದಾರೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಾಗಲೇ ತುಂಬಾ ಮಾಲ್ ಖಾಲಿಮಾಡಿದ್ದಾರೆ ಮದ್ಯಪ್ರಿಯರು.

Leave A Reply