ಕಡಬ:ಉದಯಪುರದ ಘಟನೆ ಖಂಡಿಸಿ ಆಲಂಕಾರಿನಲ್ಲಿ ಬೃಹತ್ ಪ್ರತಿಭಟನೆ!! ಹಿಂ.ಜಾ.ವೇ ಪ್ರಮುಖರು ಭಾಗಿ

ಕಡಬ:ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಹತ್ಯೆಯ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ, ಹಾಗೂ ದುಷ್ಕೃತ್ಯ ಎಸಗುವ ಭಯೋದ್ಪಾದನ ನಂಟಿರುವ ಹಂತಕರನ್ನು ಮಟ್ಟಹಾಕಬೇಕೆಂದು ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ಆಲಂಕಾರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿಂ.ಜಾ.ವೇ ಪ್ರಾಂತ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಈ ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು. ಪ್ರತಿಭಟನಾ ಸಭೆಯಲ್ಲಿ ದಯಾನಂದ ಆಲಡ್ಕ ಸಹಿತ ಜಿಲ್ಲಾ ಪ್ರಮುಖ ವೆಂಕಟರಮಣ ಕುತ್ಯಾಡಿ,ತಾಲೂಕು ಪ್ರಮುಖರಾದ ಜಿನಿತ್ ಮರ್ದಾಳ,ಹರೀಶ್ ನೆಕ್ಕಿಲಾಡಿ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂ.ಜಾ.ವೇ ಮುಖಂಡ ಮಲ್ಲೇಶ್ ಆಲಂಕಾರು ಸ್ವಾಗತಿಸಿ,ರವೀಂದ್ರದಾಸ್ ಪೂಂಜಾ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.