ವಿಟ್ಲ:ಮತ್ತೊಮ್ಮೆ ನಡೆಯಿತೇ ಮಾರಕಾಸ್ತ್ರ ದಾಳಿ-ಬಸ್ಸು ತಂಗುದಾಣದಲ್ಲಿ ರಕ್ತದ ಮಡು !?? ಸ್ಥಳಕ್ಕೆ ಪೊಲೀಸರ ಭೇಟಿ-ಪರಿಶೀಲನೆ!!

Share the Article

ವಿಟ್ಲ: ಇಲ್ಲಿನ ವಿಟ್ಲ-ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿನ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ರಕ್ತದ ಮಡು ಕಂಡುಬಂದಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾರಕಾಸ್ತ್ರ ದಾಳಿ ಪ್ರಕರಣಗಳ ರಕ್ತದ ಕಲೆ ಮಾಸುವ ಮುನ್ನವೇ ಇಂತಹ ಘಟನೆ ಬೆಳಕಿಗೆ ಬಂದಿರುವುದು ಗ್ರಾಮೀಣ ಭಾಗದ ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply