ಮಂಗಳೂರು MCC ಬ್ಯಾಂಕ್ ನಲ್ಲಿ ಉದ್ಯೋಗವಕಾಶ

ಮಂಗಳೂರು: ಕಡಲತಡಿಯ ಅತ್ಯುತ್ತಮ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ‘ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ ಹಲವು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿದಾರರು ಕಡ್ಡಾಯವಾಗಿ ಕನ್ನಡ ಭಾಷೆ ಬಲ್ಲವರಾಗಿರಬೇಕು.

 

ಹುದ್ದೆಗಳ ಹೆಸರು , ವಿವರ:
ಅಕೌಂಟೆಂಟ್ 05
ಕಿರಿಯ ಅಧಿಕಾರಿ 02
ಕಿರಿಯ ಸಹಾಯಕ 15
ಅಟೆಂಡರ್/ಡ್ರೈವರ್ 03
ಒಟ್ಟು ಹುದ್ದೆ : 25
ಅರ್ಜಿ ಸಲ್ಲಿಸುವ ವಿಧಾನ : ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು
ಕೊನೆಯ ದಿನಾಂಕ : ಜುಲೈ 8
ಸ್ಥಳ : ಮಂಗಳೂರು

ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಅಭ್ಯರ್ಥಿಗಳು ಅಂಚೆ, ಕೊರಿಯರ್ ಅಥವಾ ಖುದ್ದಾಗಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಅರ್ಜಿ ಅಥವಾ ಪಾವತಿಗೆ ಅವಕಾಶವಿರುವುದಿಲ್ಲ.

ವಿದ್ಯಾರ್ಹತೆಯ ವಿವರಗಳು ಇಲ್ಲಿದೆ
1. ಅಕೌಂಟೆಂಟ್: ಈ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Bsc, Bcom, BA, Mcom, BE, BBM, BCA, MCA ಹೀಗೆ ಯಾವುದಾದರೂ ಒಂದು ವಾಣಿಜ್ಯ, ಸಹಕಾರ ಅಥವಾ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. Tally ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಕಡ್ಡಾಯ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

2. ಕಿರಿಯ ಅಧಿಕಾರಿ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್​ಸಿ, ಬಿ.ಕಾಮ್, BA, ಎಂ.ಕಾಮ್, BE, BBM, BCA, MCA ಹೀಗೆ ಯಾವುದಾದರೂ ಒಂದು ವಾಣಿಜ್ಯ, ಸಹಕಾರ ಅಥವಾ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕನ್ನಡ ಭಾಷೆಯಲ್ಲಿ ವ್ಯವಹಾರ, ಬರೆಯಲು ಹಾಗೂ ಓದುವ ಸಾಮರ್ಥ್ಯ ಹೊಂದಿರಬೇಕು. ಇಲ್ಲೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಅನುಭವವಿದ್ದಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

3. ಕಿರಿಯ ಸಹಾಯಕ (Junior Assistant) :
ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿರಬೇಕು. ಕನ್ನಡದಲ್ಲಿ ವ್ಯವಹಾರ ಜ್ಞಾನ, ಸ್ಪಷ್ಟವಾಗಿ ಓದಲು ಹಾಗೂ ಬರೆಯಲು ಬರುವಂತವರಾಗಿರಬೇಕು. ಕಂಪ್ಯೂಟರ್ ಜ್ಞಾನವೂ ಅಗತ್ಯವಿರುತ್ತದೆ.

4. ಅಟೆಂಡರ್/ಡ್ರೈವರ್ (Attender/Driver)
ಎಸ್‌ಎಸ್‌ಎಲ್​ಸಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಒಂದು ಭಾಷೆಯನ್ನಾಗಿರಬೇಕು.

ವಯೋಮಿತಿ:
ಕನಿಷ್ಟ – 18 ವರ್ಷ ಗರಿಷ್ಟ ವಯೋಮಿತಿ ಹೀಗಿವೆ. ಸಾಮಾನ್ಯ ಅಭ್ಯರ್ಥಿಗಳಿಗೆ – 35 ವರ್ಷಪರಿಶಿಷ್ಟ ಜಾತಿ/ಪಂಗಡ/ ವರ್ಗ ಹಾಗೂ ಹಿಂದುಳಿದ ವರ್ಗ 1 – 40 ವರ್ಷಗಳು.
ಇತರೆ ಹಿಂದುಳಿದ ವರ್ಗಗಳಿಗೆ (2ಎ, 2ಬಿ, 3ಎ, 3ಬಿ) – 38 ವರ್ಷಗಳು.

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿ ಹಾಗೂ ಹಿಂದುಳಿದ ವರ್ಗಗಳಿಗೆ – ₹1000/-ಪರಿಶಿಷ್ಟ ಜಾತಿ/ಪಂಗಡ/ ಹಿಂದುಳಿದ ವರ್ಗ 1 ₹ 500/-

ಅರ್ಜಿ ಶುಲ್ಕ ಪಾವತಿ ವಿಧಾನ:
ಅರ್ಜಿದಾರರು ಕಡ್ಡಾಯವಾಗಿ ಡಿ.ಡಿ. ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. “ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ನಿ.” ಈ ಹೆಸರಿಗೆ ಡಿ.ಡಿ. ಮಾಡಬಹುದು.

ಅರ್ಜಿ ಪಡೆಯುವ ವಿಧಾನ:
ಆಸಕ್ತರು ಎಂಸಿಸಿ ಬ್ಯಾಂಕ್ ಇದರ ಅಧಿಕೃತ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಅರ್ಜಿದಾರರು ಅರ್ಜಿಗಳನ್ನು ತುಂಬಿದ ಬಳಿಕ ಅರ್ಜಿ ಸಲ್ಲಿಕೆ ಇರುವ ಕೊನೆಯ ದಿನಾಂಕಕ್ಕೂ ಮುನ್ನ ತಲುಪುವಂತೆ ಈ ವಿಳಾಸಕ್ಕೆ ಕಳುಹಿಸಬೇಕು ಅಥವಾ ತಲುಪಿಸಬೇಕು.

ವಿಳಾಸ:
ಮಹಾಪ್ರಬಂಧಕರು, ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ನಿ., ಆಡಳಿತ ಕಚೇರಿ, ಒಂದನೇ ಮಹಡಿ, ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ, ಹಂಪನಕಟ್ಟೆ, ಮಂಗಳೂರು – 575001

ಆಯ್ಕೆ ವಿಧಾನ:
200 ಅಂಕಗಳ ಲಿಖಿತ ಪರೀಕ್ಷೆ ಹಾಗೂ ಅದರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ 15 ಅಂಕಗಳಿಗೆ ಸೀಮಿತವಾಗಿ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪ್ರಮಾಣ ಪತ್ರಗಳು ಅರ್ಜಿದಾರರು ಸರಳ ವಿಧಾನದಲ್ಲಿ ಅರ್ಜಿಯನ್ನು ತುಂಬಿ ಲಕೋಟೆಯಲ್ಲಿ ಮುಚ್ಚುವ ವೇಳೆ ಕಡ್ಡಾಯವಾಗಿ ಈ ಎಲ್ಲಾ ದಾಖಲೆಗಳ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತೀಕರಿಸುವುದನ್ನು ಮರೆಯಬೇಡಿ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
0824- 2421369/2445742, 2445746 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ದಾಖಲೆಗಳು:
1. ಇತ್ತೀಚೆಗಿನ ಮೂರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು (ಫೋಟೋ ಹಿಂದೆ ಸಹಿ ಕಡ್ಡಾಯ)
2. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ
3. ವಯಸ್ಸಿನ ದೃಢೀಕರಣಕ್ಕೆ ಎಸ್‌ಎಸ್‌ಎಲ್​ಸಿ ಅಂಕಪಟ್ಟಿ
4. ಸೇವಾ ಅನುಭವ ಪತ್ರ- ಈ ಎಲ್ಲಾ ದಾಖಲೆಗಳಿಗೂ ಕಡ್ಡಾಯವಾಗಿ ಪ್ರತಿ ಪುಟಗಳಿಗೂ ಅನ್ವಯಿಸುವಂತೆ ಸ್ವಹಸ್ತಾಕ್ಷರ ಬಳಸಿ ಸಹಿ ಮಾಡತಕ್ಕದ್ದು.

Leave A Reply

Your email address will not be published.