ಮದ್ಯಪಾನ ಮಾಡಿದಾಗ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ
ಮದ್ಯಪಾನ ಮಾಡುವಾಗ ಸರಿಯಾದ ಆಹಾರ ಕ್ರಮ ತೆಗೆದುಕೊಳ್ಳದಿದ್ದರೆ ಆರೋಗ್ಯ ಹದಗೆಡುತ್ತದೆ. ಮದ್ಯಪಾನ ಕುಡಿದ ನಂತರ ಕೆಲವು ಆಹಾರ ಅಥವಾ ಪಾನೀಯಗಳಿಂದ ತಪ್ಪದೇ ದೂರವಿರಬೇಕು. ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದು ಇಲ್ಲಿದೆ ನೋಡಿ
ಮದ್ಯಪಾನ ಸೇವಿಸಿದ ನಂತರ ಯಾವುದೇ ಕಾರಣಕ್ಕೂ ಚಾಕೋಲೆಟ್ ಗಳನ್ನು ತಿನ್ನಬಾರದು. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗುತ್ತದೆ. ಅಲ್ಲದೇ ಅಸಿಡಿಟಿ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.
ಉಪ್ಪು ಹೆಚ್ಚಾಗಿ ಇರುವ ಆಹಾರಗಳನ್ನು ಸೇವಿಸಬಾರದು. ಇದರಿಂದಾಗಿ ಅತ್ಯಂತ ವೇಗವಾಗಿ ಶರೀರದಲ್ಲಿನ ನೀರು ಕಡಿಮೆಯಾಗುತ್ತದೆ. ಇದರ ಪರಿಣಾಮ ದೇಹದಲ್ಲಿನ ಶಕ್ತಿಯು ಪೂರ್ತಿಯಾಗಿ ತಗ್ಗಿಸಿಬಿಡುತ್ತದೆ.
ಬ್ರೆಡ್ ಅನ್ನು ಮದ್ಯಪಾನ ಮಾಡುವಾಗ ತಿನ್ನಬಾರದು. ಏಕೆಂದರೆ, ಬ್ರೆಡ್ ಶರೀರದಲ್ಲಿನ ನೀರಿನಾಂಶವನ್ನು ಕಡಿಮೆ ಮಾಡಿ, ಡೀಹೈಡ್ರೇಟ್ ಮಾಡುತ್ತದೆ.
ಮದ್ಯಪಾನದ ನಂತರ ಕಾಫಿ ಕುಡಿದರೆ, ಮರುದಿನ ಬೆಳಗ್ಗೆ ವಾಂತಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ