ಅಕ್ಕಿ ಬೆಲೆ ಏರಿಸಿದ ಸರಕಾರ

ಆಹಾರ ಪದಾರ್ಥಗಳ ಬೆಲೆಯಲ್ಲಿ ತೀವ್ರ
ಏರಿಕೆ ಹಿನ್ನೆಲೆಯಲ್ಲಿ ಹಣದುಬ್ಬರ ಏರುಮುಖವಾಗಿದೆ. ಎಲ್ಲರಿಗೂ ತಿಳಿದಿರುವ ಹಾಗೇ, ಇತ್ತೀಚೆಗೆ ಗೋಧಿ ಬೆಲೆಯಲ್ಲಿ ಭಾರೀ ಏರಿಕೆ ಆಗಿತ್ತು. ಇದರ ಮಧ್ಯದಲ್ಲಿ ಭಾರತೀಯರ ಪ್ರಧಾನ ಆಹಾರವಾಗಿರುವ ಅಕ್ಕಿ ಬೆಲೆಯಲ್ಲಿ ಕೂಡ ಕಳೆದ ಹಲವಾರು ದಿನಗಳಿಂದ ಏರಿಕೆ ಕಂಡುಬಂದಿದೆ. ಕಳೆದ 5 ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ.

ಬಾಂಗ್ಲಾದೇಶ ( ನೆರೆರಾಷ್ಟ್ರ) ಅಕ್ಕಿಯ ಮೇಲಿನ ಆಮದು ಸುಂಕವನ್ನು ಶೇ.62.5ರಿಂದ ಶೇ.25ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಬಾಂಗ್ಲಾದೇಶ ಆಮದು ಸುಂಕ ಇಳಿಕೆ ಮಾಡಿದ ಬೆನ್ನಲ್ಲೇ ಭಾರತದ ವ್ಯಾಪಾರಿಗಳು ಬಾಂಗ್ಲಾಕ್ಕೆ ಅಕ್ಕಿ ರಫ್ತು ಮಾಡುವ ಒಪ್ಪಂದಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರಿಕೆಯಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಬಾಸ್ಮತಿಯೇತರ ಅಕ್ಕಿ ಬೆಲೆಯು ಪ್ರತಿ ಟನ್ ಗೆ 360 ಡಾಲರ್ ಗೆ ಏರಿದ್ದು, ಈ ಹಿಂದೆ ಪ್ರತಿ ಟನ್ ಅಕ್ಕಿ ಬೆಲೆ 350 ಡಾಲರ್ ನಷ್ಟಿತ್ತು. ಬಾಂಗ್ಲಾದೇಶ ಅಕ್ಕಿ ಆಮದಿನ ಮೇಲೆ ತೆರಿಗೆ ಕಡಿತಗೊಳಿಸಿದ ಸುದ್ದಿ ಹೊರಬಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ’ ಎಂದು ಅಕ್ಕಿ ರಫ್ತುಗಾರರ ಸಂಘಟನೆ ಅಧ್ಯಕ್ಷ ಬಿ.ವಿ. ಕೃಷ್ಣ ರಾವ್ ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಪ್ರಮುಖ ಆಹಾರ ಧಾನ್ಯಗಳ ಕೊರತೆ ಎದುರಿಸುತ್ತಿದೆ. ಅಲ್ಲದೆ, ಗೋಧಿ ರಫ್ತಿನ ಮೇಲೆ ಭಾರತದ ನಿರ್ಬಂಧದ ಕಾರಣಕ್ಕೆ ಬಾಂಗ್ಲಾದೇಶದ ಗೋಧಿ ಆಮದಿನಲ್ಲಿ ಕೂಡ ಇಳಿಕೆಯಾಗಿದೆ. ಇನ್ನು ಪ್ರವಾಹದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಭತ್ತದ ವ್ಯವಸಾಯಕ್ಕೆ ಕೂಡ ಹೊಡೆತ ಬಿದ್ದಿದೆ.

ಬಾಂಗ್ಲಾದೇಶ 2021ನೇ ಹಣಕಾಸು ಸಾಲಿನಲ್ಲಿ 13.59 ಲಕ್ಷ ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿದೆ. ಚೀನಾದ ಬಳಿಕ ಭಾರತ ಜಗತ್ತಿನ ಅತೀದೊಡ್ಡ ಅಕ್ಕಿ ಬಳಕೆ ಮಾಡುವ ರಾಷ್ಟ್ರವಾಗಿದೆ. 2021-22 ನೇ ಆ ಸಾಲಿನಲ್ಲಿ ಭಾರತ 6.11 ಬಿಲಿಯನ್ ಡಾಲರ್ ಮೌ ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡಿದೆ. 2021ನೇ ಆರ್ಥಿಕ ಸಾಲಿನಲ್ಲಿ ಭಾರತ 4.8 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಿದೆ

‘ಅಕ್ಕಿ ಬೆಲೆ ಈಗಾಗಲೇ ಶೇ.10ರಷ್ಟು ಹೆಚ್ಚಾಗಿದ್ದು, ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ. ಬಾಂಗ್ಲಾದೇಶವು ಸಾಮಾನ್ಯವಾಗಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಅಕ್ಕಿಯನ್ನು ಖರೀದಿಸುತ್ತದೆ. ಈ ಮೂರು ರಾಜ್ಯಗಳಲ್ಲಿ ಅಕ್ಕಿ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಈ ಮೂರು ರಾಜ್ಯಗಳಲ್ಲಿ ಅಕ್ಕಿಯ ಬೆಲೆ ಏರಿಕೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಿದ್ದು, ಶೇ.10ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ’.

Leave A Reply

Your email address will not be published.