ಕಡಬ: ಬಲ್ಯ ಶ್ರೀ ಉಮಾಮಹೇಶ್ವರಿ ದೇವಾಲಯದ ಅಧ್ಯಕ್ಷ ಚಿತ್ತರಂಜನ್ ರೈ ಮಾಣಿಗ ವಿಧಿವಶ

ಕಡಬ: ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ, ಕೃಷಿಕರಾದ ಚಿತ್ತರಂಜನ್ ರೈ ಮಾಣಿಗ ಇಂದು ನಿಧನರಾದರು.

 

ಸುಮಾರು ಹದಿನೈದು ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಇವರು ದೇವಾಲಯದ ಸರ್ವತ್ತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಯುವಕರಿಗೆ ಸ್ಫೂರ್ತಿಯಾಗಿ, ಊರಿನ ಹಿರಿಯರಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಉಪಸ್ಥಿತರಿದ್ದು ಯುವಕರಿಗೆ ಸಮಾಜಮುಖಿ ಕಾರ್ಯದತ್ತ ಮಾರ್ಗದರ್ಶನ ನೀಡುತ್ತಿದ್ದ ರೈಗಳ ನಿಧನಕ್ಕೆ ಇಡೀ ಗ್ರಾಮವೇ ಸಂತಾಪ ಸೂಚಿಸಿದೆ.

Leave A Reply

Your email address will not be published.