ದೇಶದೆಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದ್ದ “ಅಗ್ನಿಪಥ್” ಗೆ ಮೂರೇ ದಿನದಲ್ಲಿ ಹರಿದುಬಂದ ಅರ್ಜಿಗಳು ಎಷ್ಟು ಗೊತ್ತಾ ?!!

Share the Article

ನವದೆಹಲಿ: ದೇಶದಲ್ಲಿ ಹೊಸದಾಗಿ ಜಾರಿಗೊಳಿಸಲಾಗಿರುವ ಅಗ್ನಿಪಥ್ ಯೋಜನೆಗೆ, ದೇಶಾದ್ಯಂತ ಭಾರೀ ವಿರೋಧಕ್ತವಾದ ಮೂರೇ ದಿನದಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಭಾನುವಾರ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆಗೆ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರನ್ನು ನೇಮಕಾತಿ ಮಾಡುವುದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ನೇಮಕಾತಿ ನೋಂದಣಿ ಆರಂಭವಾಗಿದ್ದು, ಅಗ್ನಿವೀರರ ನೇಮಕಾತಿಗೆ ಯುವಕರಿಂದ ಭಾರಿ ಸ್ಪಂದನೆ ದೊರಕಿದೆ. ಮೂರು ಸಾವಿರ ಹುದ್ದೆಗಳಿಗೆ ಮೂರೇ ದಿನದಲ್ಲಿ 569600 ಅರ್ಜಿ ಸಲ್ಲಿಕೆಯಾಗಿವೆ.

ಜುಲೈ 5ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆದರೆ ಪ್ರಸಕ್ತ ವರ್ಷದಲ್ಲಿ 3000 ಅಗ್ನಿವೀರರ ಆಯ್ಕೆಗೆ ಮಾತ್ರ ಅವಕಾಶವಿದ್ದು, ಒಂದು ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ಬಳಿಕ ಇದೇ ಡಿಸೆಂಬರ್ ತಿಂಗಳಿನಿಂದ ತರಬೇತಿ
ಪ್ರಾರಂಭಿಸಲಾಗುವುದು ಎಂದು ಸೇನೆಯ
ಮೂಲಗಳು ತಿಳಿಸಿವೆ.

ಅಗ್ನಿಪಥ ಯೋಜನೆಗೆ ವಿರೋಧಿಸಿ ದೇಶಾದ್ಯಂತ ಹಲವೆಡೆ ಭಾರೀ ಪ್ರತಿಭಟನೆಗಳು ನಡೆಸಲಾಗಿತ್ತು.
ಆದರೆ ದೇಶದ ಹಿತದೃಷ್ಟಿಯಿಂದಾಗಿ ಯಾವುದೇ ಕಾರಣಕ್ಕೂ ಇದನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ರವಾನೆ
ಮಾಡಿತ್ತು. ಸದ್ಯ ನಿರೀಕ್ಷೆಗೂ ಮೀರಿ ಯುವಕರಿಂದ ಅರ್ಜಿ ಸಲ್ಲಿಕೆಯಾಗಿರುವುದು ಯೋಜನೆಗೆ
ವ್ಯಕ್ತವಾದ ಬೆಂಬಲ ಆಗಿದೆ ಎಂಬುದು ಸ್ಪಷ್ಟವಾಗಿದೆ.

Leave A Reply