ಹಿರಿಯ ಖಳ ನಟ ರೈ ಮೋಹನ್ ಮನೆಯಲ್ಲಿ ಶವವಾಗಿ ಪತ್ತೆ !!

ಕೆಲ ದಿನಗಳ ಹಿಂದಷ್ಟೇ ಒಡಿಶಾದ ಯುವ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಾವಿನ ಸುದ್ದಿ ಇನ್ನೂ ಮಾಸುವ ಮುನ್ನವೇ ಹಿರಿಯ ಒಡಿಯ ನಟ ರೈ ಮೋಹನ್ ಪರಿದಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭುವನೇಶ್ವರದಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

 

ಒಡಿಯಾ ಸಿನಿಮಾ ರಂಗದಲ್ಲಿ ಖಳನಟನಾಗಿ ಫೇಮಸ್ ಆಗಿರುವ ರೈ ಮೋಹನ್ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡಿದ ಬಹುತೇಕ ಪಾತ್ರಗಳ ವಿಲನ್ ಆಗಿದ್ದರೂ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟ ಇವರಾಗಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವಾದರೂ, ತನಿಖೆ ನಡೆಯುತ್ತಿದೆ.

ಬೆಂಗಾಲಿ, ಒಡಿಯಾ ಸಿನಿಮಾಗಳಲ್ಲಿ ನಟಿಸಿರುವ ಇವರು, ನಟನೆಗಾಗಿ ಒಡಿಶಾ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ‘ಹೇ ಅನನಿ’ ಡೈಲಾಗ್ ಮೂಲಕ ಇವರನ್ನು ಅಭಿಮಾನಿಗಳು ಗುರುತಿಸುತ್ತಿದ್ದು, ಪ್ರಾಚಿ ಬಿಹಾರದ ಉದಯ್ ಪುರ ಅಪಾರ್ಟ್ಮೆಂಟ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

Leave A Reply

Your email address will not be published.