ಜಲ ಸಂಪನ್ಮೂಲ ಇಲಾಖೆಯಲ್ಲಿ ಉದ್ಯೋಗವಕಾಶ : 155 SDA ಹುದ್ದೆಗಳ ನೇಮಕ: ಅರ್ಜಿ ಆಹ್ವಾನ
ಜಲ ಸಂಪನ್ಮೂಲ ಇಲಾಖೆಯ ಗ್ರೂಪ್-ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಉದ್ಯೋಗ ಇಲಾಖೆ : ಜಲ ಸಂಪನ್ಮೂಲ ಇಲಾಖೆ ಹುದ್ದೆಗಳ ಹೆಸರು : ದ್ವಿತೀಯ ದರ್ಜೆ ಸಹಾಯಕ
ಹುದ್ದೆಗಳ ಸಂಖ್ಯೆ : 155
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-07-2022
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-08 2022 ರ ಸಂಜೆ 05-30 ಗಂಟೆಯೊಳಗೆ
ಇತರೆ : 29
ಮಹಿಳಾ: 47
ಗ್ರಾಮೀಣ: 39
ಮಾಜಿ ಸೈನಿಕ : 15
ಕನ್ನಡ ಮಾಧ್ಯಮ ಅಭ್ಯರ್ಥಿ: 8
ತೃತೀಯ ಲಿಂಗ ಅಭ್ಯರ್ಥಿ: 2
ಅಂಗವಿಕಲತೆ ಅಭ್ಯರ್ಥಿ: 8
ಯೋಜನಾ ನಿರಾಶ್ರಿತ ಅಭ್ಯರ್ಥಿ: 7
ಒಟ್ಟು 155
ವಿಶೇಷ ಸೂಚನೆ / ಆಯ್ಕೆ ವಿಧಾನ :
ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ.
ವಯೋಮಿತಿ : ವಯಸ್ಸು ಮತ್ತು ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಅರ್ಹತೆ ಆಧಾರದ ಮೇಲೆ ಆಯ್ಕೆಯನ್ನು
ಮಾಡಲಾಗುವುದು.
- ಕನಿಷ್ಠ 18 ವರ್ಷ ಆಗಿರುವ ಗರಿಷ್ಠ 28 ವರ್ಷ ಮೀರದ ಅಭ್ಯರ್ಥಿಗಳ ಒಂದು ಅರ್ಹತಾ ಪಟ್ಟಿಯನ್ನು ಹಾಗೂ 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುವುದು.
- 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು.
- ಸದರಿ ಅರ್ಹತಾ ಪಟ್ಟಿಯಲ್ಲಿ ಸೂಕ್ತ ಅರ್ಹ
ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮಾತ್ರ 18 ವರ್ಷದಿಂದ 28 ವರ್ಷಗಳ ವಯೋಮಿತಿಯ ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನಂತರದ ಆದ್ಯತೆ
ನೀಡಲಾಗುವುದು.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪಾಸ್ / 12ನೇ ತರಗತಿ ಪಾಸ್ ಆಗಿರಬೇಕು.
ಅಥವಾ
3 ವರ್ಷದ ಡಿಪ್ಲೊಮ / 2 ವರ್ಷದ ಐಟಿಐ ಪಾಸ್ ಜೊತೆಗೆ ಎನ್‌ಐಒಎಸ್’ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ’ಗೆ ತತ್ಸಮಾನವೆಂದು ಪರಿಗಣಿಸಲಾಗುವುದು.
ವೇತನ : ರೂ. 21,400 -ರೂ. 42,000
ವಯಸ್ಸಿನ ಅರ್ಹತೆ : ಕನಷ್ಠ 18 ರಿಂದ ಗರಿಷ್ಠ 40 ವರ್ಷ ಮೀರಿರಬಾರದು.
ಆಯ್ಕೆಗೆ ಪರಿಗಣಿಸಲ್ಪಡುವ ಅರ್ಹ ಅಭ್ಯರ್ಥಿಗಳು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕಾದ
ಪ್ರಮಾಣ ಪತ್ರಗಳು :
ದ್ವಿತೀಯ ಪಿಯುಸಿ ವಿದ್ಯಾರ್ಹತೆ ದಾಖಲೆ.
ಜನ್ಮ ದಿನಾಂಕ ಮಾಹಿತಿ ದಾಖಲೆ ಅಥವಾ
ಎಸ್‌ಎಸ್ಎಲ್‌ಸಿ ಅಂಕಪಟ್ಟಿ
ಮೀಸಲಾತಿ ಕೋರಿದ್ದಲ್ಲಿ ದಾಖಲೆ – ಜಾತಿ ಪ್ರಮಾಣ ಪತ್ರ
ಪಾಸ್‌ಪೋರ್ಟ್ ಅಳತೆ ಭಾವಚಿತ್ರ
ಸಹಿ ಸ್ಕ್ಯಾನ್ ಕಾಪಿ
ಜಲಸಂಪನ್ಮೂಲ ಇಲಾಖೆ ಅಧಿಕೃತ ವೆಬ್‌ಸೈಟ್ ವಿಳಾಸ : https://waterresouces.karnataka.gov.in
ಆನ್ಲೈನ್ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.