ಸದ್ದಿಲ್ಲದೇ “ಎಂಗೇಜ್” ಆದ ಚಂದನವನದ ನಟಿ | ಅತಿ ಶೀಘ್ರದಲ್ಲೇ ಮದುವೆ!!!

ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ‘ತಿಥಿ’ ಚಿತ್ರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನ್ಯಾಷನಲ್ ಅವಾರ್ಡ್ ದೊರೆತ ಚಿತ್ರ. ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಸಿನಿಮಾ ಹಿನ್ನಲೆಯಿಲ್ಲದೇ ಬಂದು ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಚಿತ್ರದ ನಟಿ ಪೂಜಾ ಅವರ ನಟನೆಗೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದಾದ ಬಳಿಕ ಒಂದು ಸಿನಿಮಾದಲ್ಲಿ ನಟಿಸಿದ ಅವರು ಸದ್ಯ ಚಿತ್ರಂಗದಿಂದ ದೂರವಿದ್ದಾರೆ. ಅನಂತರ ಅವರು ನಟಿಸಿದ ಬೆರಳೆಣಿಕೆಯ ಸಿನಿಮಾ‌ ಕೂಡಾ ಅಷ್ಟೊಂದು ಸದ್ದು ಮಾಡಿರಲಿಲ್ಲ. ಈಗ ನಾವು ಈ ಸಿನಿಮಾದ ಹೀರೋಯಿನ್ ಅಂದರೆ ಪೂಜಾ ಬಗ್ಗೆ ಯಾಕೆ ಮಾತಾಡ್ತಾ ಇದ್ದೀವಿ ಅಂದರೆ, ಪೂಜಾ ಅವರು ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿ ಕೊಂಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಪೂಜಾ ಅವರು ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮ್ ಎಂಬುವವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

 

ಹೌದು, ನಟಿ ಪೂಜಾ ಯಾವುದೇ ಮಾಹಿತಿ ಸಹ ಹೊರಹಾಕದೇ ಇದೀಗ ಎಂಗೆಜ್ ಮೆಂಟ್ ಆಗಿದ್ದಾರೆ. ಆದರೆ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತಿಥಿ ಚಿತ್ರದಲ್ಲಿ ಕಾವೇರಿ ಪಾತ್ರ ಮಾಡಿದ್ದ ಪೂಜಾ ಎಸ್.ಎಂ ಅವರು ಇಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡಿಸೆಂಬರ್ 3 ಮತ್ತು 4ರಂದು ನಟಿ ಪೂಜಾ ಮತ್ತು ಪ್ರೇಮ್ ಅವರ ವಿವಾಹ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪೂಜಾ ಅವರಿಗೆ ತಿಥಿ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಅವರು ‘ದಾರಿ ಯಾವುದಯ್ಯ ವೈಕುಂಠಕೆ’ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಿಥಿ ಸಿನಿಮಾದಲ್ಲಿ ನಾಯಕಿಯಯಾಗಿ ನಟಿಸಿದ್ದ ಪೂಜಾ ನಂತರ ನಿಧಾನವಾಗಿ ಚಿತ್ರರಂಗದಿಂದ ದೂರವಾದರು. ತಿಥಿ ಚಿತ್ರದ ಅಭಿನಯಕ್ಕಾಗಿ “ಅತ್ಯುತ್ತಮ ಪೋಷಕ ನಟಿ” ರಾಜ್ಯಪ್ರಶಸ್ತಿ ಸಿಕ್ಕಿತ್ತು. ಇದಾದ ಬಳಿಕ ಅವರು ದಾರಿ ಯಾವುದಯ್ಯ ವೈಕುಂಠಕೆ ಮತ್ತು ನೀವು ಕರೆ ಮಾಡಿದ ಚಂದದಾರರು ಬಿಜಿಯಾಗಿದ್ದಾರೆ ಎಂಬ ಚಿತ್ರಗಳಲ್ಲಿ ನಟಿಸಿದರೂ ಅವಕಾಶಗಳು ಸರಿಯಾಗಿ ಸಿಗದ ಕಾರಣ ಚಿತ್ರರಂಗದಿಂದ ದೂರ ಸರಿದು ಓದಿನ ಕಡೆ ಗಮನ ಹರಿಸಿದರು ಎನ್ನಲಾಗಿದೆ.

ಇನ್ನು, ಚಿತ್ರಗಳು ಸರಿಯಾಗ ಸಿಗದ ಕಾರಣ ಪೂಜಾ ಓದಿನತ್ತ ಗಮನ ಹರಿಸಿದರು.ಪುಜಾ ಅವರು MCA ಮಾಡಿಕೊಂಡಿದ್ದಾರೆ‌. ಸದ್ಯಕ್ಕೆ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪೂಜಾ ಅವರು ಮತ್ತೆ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ಅವಕಾಶಗಳು ಸಿಕ್ಕಲ್ಲಿ ಖಂಡಿತವಾಗಿಯೂ ಮತ್ತೆ ಬಣ್ಣದ ಲೋಕಕ್ಕೆ ಬರುವುದಾಗಿ ಪೂಜಾ ಹೇಳಿಕೊಂಡಿದ್ದರು.

Leave A Reply

Your email address will not be published.