ರಾರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಶಾಸಕ ರೇಣುಕಾಚಾರ್ಯ !!

Share the Article

ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಡ್ಯಾನ್ಸ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಹಾಡಿಗೆ ಶಾಸಕರು ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಹೌದು. ಶಾಸಕರು ರಾರಾ ರಕ್ಕಮ್ಮ ಹಾಗೂ ನಾಟಿ ಪೋರಿಯೋ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಹೊನ್ನಾಳಿಯ ಗೋವಿನಕೋವಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಆರ್ಕೇಸ್ಟ್ರಾ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ರೇಣುಕಾಚಾರ್ಯ ಸ್ಟೆಪ್ ಹಾಕಿದ್ದಾರೆ.

ಇತ್ತ ವೇದಿಕೆ ಮೇಲೆ ರೇಣುಕಾಚಾರ್ಯ ಬರುತ್ತಿದ್ದಂತೆ ಮಕ್ಕಳು ಫುಲ್ ಕುಣಿದಾಡಿದ್ದಾರೆ. ರೇಣುಕಾಚಾರ್ಯ ಅವರು ಕೆಲ ಕಾಲ ಮಕ್ಕಳ ಜೊತೆ ಮಕ್ಕಳಾಗಿ ಹೆಜ್ಜೆ ಹಾಕಿ ಅವರನ್ನು ಮನರಂಜಿಸಿದ್ದರಲ್ಲದೇ ನೆರೆದಿದ್ದ ಸಾರ್ವಜನಿಕರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು.

Leave A Reply