SSC ಇಂದ ಭರ್ಜರಿ ಸಿಹಿ ಸುದ್ದಿ | ಬರೋಬ್ಬರಿ 70 ಸಾವಿರ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ, ನೋಟಿಸ್ ಪ್ರಕಟಿಸಿದ ಎಸ್‌ಎಸ್‌ಸಿ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಗ್ರೂಪ್‌ನ ಹುದ್ದೆಗಳನ್ನು ಪ್ರತಿ ವರ್ಷವು ಭರ್ತಿ ಮಾಡಲು ನೇಮಕಾತಿ ಪರೀಕ್ಷೆ ನಡೆಸುತ್ತದೆ. ಎಸ್‌ಎಸ್‌ಸಿ ಇದೀಗ ದೇಶದ ಯುವಜನತೆಗೆ ಬಂಪರ್ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಿಬ್ಬಂದಿ ನೇಮಕಾತಿ ಆಯೋಗವು 70,000 ಹುದ್ದೆಗಳನ್ನು ಹೆಚ್ಚುವರಿ ಆಗಿ ಭರ್ತಿ ಮಾಡಲು ನೇಮಕ ಪ್ರಕ್ರಿಯೆ ನಡೆಸುವುದಾಗಿ ನೋಟಿಸ್ ಬಿಡುಗಡೆ ಮಾಡಿದೆ.
ದೇಶದಾದ್ಯಂತ ಇರುವ ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಯ ಕಛೇರಿಗಳಲ್ಲಿ ಕೆಲಸ ಪಡೆಯಬೇಕು ಎಂದು ಕನಸು ಹೊತ್ತ ಯುವಜನತೆಯೂ ಇಂದಿನಿಂದಲೇ ಎಸ್ಎಸ್‌ಸಿ ನಡೆಸುವ ವಿವಿಧ ಗ್ರೂಪ್ ಹುದ್ದೆಗಳ ಪರೀಕ್ಷೆಗಳಿಗೆ ಇಂದಿನಿಂದಲೇ ಸಿದ್ಧತೆ ನಡೆಸಿ, ನಿರಂತರ ಓದುವುದನ್ನು ರೂಢಿಸಿಕೊಳ್ಳಿ, ಎಸ್ಎಸ್ ಸಿ ಯಾವೆಲ್ಲ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಎಸ್‌ಸ್‌ಸಿ ನಡೆಸುವ ವಿವಿಧ ಪರೀಕ್ಷೆಗಳಿಗೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ತತ್ಸಮಾನ ವಿದ್ಯಾರ್ಹತೆ ಪಡೆದ ಎಲ್ಲರೂ ಅರ್ಜಿ ಸಲ್ಲಿಸಬಹುದಾದ ವಿವಿಧ ಪರೀಕ್ಷೆಗಳನ್ನು ನಡೆಸುತ್ತದೆ ಅವುಗಳ ಲಿಸ್ಟ್ ಈ ಕೆಳಗಿನಂತಿದೆ.
ಎಸ್ಎಸ್ ಸಿ ನಡೆಸುವ ಪರೀಕ್ಷೆಗಳ ಪಟ್ಟಿ
- ಎಸ್‌ಎಸ್‌ಸಿ ಸಿಜಿಎಲ್ (ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್ ಪರೀಕ್ಷೆ)
- ಎಸ್‌ಎಸ್‌ಸಿ ಸಿಹೆಚ್‌ಎಸ್ಎಲ್ (ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆ)
- ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸ್ಟಾಫ್ ಎಕ್ಸಾಮಿನೇಷನ್
- ಸೆಲೆಕ್ಷನ್ ಪೋಸ್ಟ್ ಎಕ್ಸಾಮಿನೇಷನ್, ಫೇಸ್-10,
2022 - ದೆಹಲಿ ಕಾನ್ ಸ್ಟೇಬಲ್ ಪರೀಕ್ಷೆ
6 ದೆಹಲಿ ಎಸ್‌ಐ ಪರೀಕ್ಷೆ - ಸೀನಿಯರ್, ಜೂನಿಯರ್ ಹಿಂದಿ ಭಾಷಾಂತರಕಾರರ ನೇಮಕ ಪರೀಕ್ಷೆ
- ವೈಜ್ಞಾನಿಕ ಸಹಾಯಕರ ನೇಮಕ ಪರೀಕ್ಷೆ
- ಜೂನಿಯರ್ ಇಂಜಿನಿಯರ್ ನೇಮಕ ಪರೀಕ್ಷೆ
- ಸ್ಟೆನೋಗ್ರಾಫರ್ ಗ್ರೇಡ್ ಸಿ, ಡಿ ಪರೀಕ್ಷೆ 2021
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಕಾನ್ ಸ್ಟೇಬಲ್ ನೇಮಕ ಪರೀಕ್ಷೆಗಳು (ಎನ್‌ಐ, ಎಸ್ಎಸ್ಎಫ್, ರೈಫಲ್‌ಮೆನ್ ಇನ್ ಅಸ್ಸಾಂ ರೈಫಲ್ಸ್)
ಮೇಲೆ ತಿಳಿಸಿದ ಎಲ್ಲಾ ಪರೀಕ್ಷೆಗಳ ಮೂಲಕ ವಿವಿಧ ಗ್ರೂಪ್ ಹುದ್ದೆಗಳನ್ನು ಕೇಂದ್ರ ಸರ್ಕಾರದಡಿ ನೇಮಕ ಮಾಡಲಾಗುತ್ತದೆ.