ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನಕ್ಕೆ ಖರ್ಚು ಮಾಡಿದೆಷ್ಟು ಗೊತ್ತಾ..? : ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರು : ರಾಜ್ಯರಾಜಧಾನಿ ಬೆಂಗಳೂರಿಗೆ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಆಗಮಿಸಿದ್ದರು. ಅವರು ಬೆಂಗಳೂರಿನಿಂದ ತೆರಳುತ್ತಿದ್ದ ಬೆನ್ನಲ್ಲೇ ಎಷ್ಟು ಖರ್ಚು ಆಗಿದೆ ಅಥವಾ ಮಾಡಲಾಗಿದೆ ಎಂಬ ಬಗ್ಗೆ ಲೆಕ್ಕಾಚಾರ ಎಲ್ಲರ ಮನಸ್ಸಲ್ಲಿ ಮೂಡುವುದು ಸಹಜ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಕೇವಲ 4 ಗಂಟೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುವುದಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಲಾಗಿತ್ತು. ಹಾಗಾಗಿ ಸಿಟಿಯ ಪ್ರತಿ ರಸ್ತೆ ರಸ್ತೆಗಳನ್ನು ರಿಪೇರಿ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲ ಲಕಲಕನೆ ಹೊಳೆಯುವಂತೆ ಮಾಡಲಾಗಿದೆ. ಬಿಬಿಎಂಪಿ ಪ್ರಧಾನಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ. ಈ ಬಗ್ಗೆ ಖುದ್ದಾಗಿ ಬಿಬಿಎಂಪಿ ಆಯುಕ್ತರ ತುಷಾರ್ ಗಿರಿನಾಥ್ ಮಾತನಾಡಿ ಪ್ರಧಾನಿ ರಾಜ್ಯಕ್ಕೆ ಬರುತ್ತಿರೋದೆ ನಮಗೆಲ್ಲ ಸಂತೋಷದ ವಿಚಾರ. ಆ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಅನುದಾನ ಬಳಸಬಹುದಾದ ‘ವಿವೇಚನ ಅನುದಾನದಡಿ’ ಫುಟ್‌ಫಾಥ್ ರಸ್ತೆ ಕಾಮಗಾರಿ, ಡಾಂಬರೀಕರಣ, ಚರಂಡಿ, ಊಟ, ವಸತಿ ಕಲ್ಪಿಸಲು ನಿಟ್ಟಿನಲ್ಲಿ ಬರೊಬ್ಬರಿ 14 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಮೈಸೂರಿನಲ್ಲೂ ರಸ್ತೆಗಳಿಗೆ ಹೊಸ ರೂಪವನ್ನೇ ನೀಡಲಾಗಿತ್ತು. ವಸತಿ, ಯೋಗ ಕಾರ್ಯಕ್ರಮಗಳ ಸಿದ್ಧತೆ ಉಪಹಾರ ಸೇರಿದಂತೆ ಬರೊಬ್ಬರಿ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.