ದ.ಕ ಜನರೇ ನಿಮಗೊಂದು ಸಿಹಿ ಸುದ್ದಿ | ಪಶು ಸಾಕಾಣಿಕೆಯಲ್ಲಿ ಆಸಕ್ತಿ ಇದ್ದರೆ, ತರಬೇತಿಗೆ ಈಗಲೇ ಅರ್ಜಿ ಸಲ್ಲಿಸಿ
ಮಂಗಳೂರು: ಹೈನುಗಾರಿಕೆ, ಪಶು ಸಾಕಾಣಿಕೆಯಲ್ಲಿ ನಿಮಗೆ ಆಸಕ್ತಿ ಇರುವವರು ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಮಾಹಿತಿ ಉಪಯೋಗವಾಗುತ್ತದೆ. ತರಬೇತಿ ಪಡೆಯಲು ನೀವು ಕೂಡಲೇ ‘ಪಶುಮಿತ್ರ’ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ತಕ್ಷಣವೇ ತಮ್ಮ ಸ್ವ ವಿವರಗಳೊಂದಿಗೆ ಅರ್ಜಿ ಸಲ್ಲಿಸಿ ಸೂಕ್ತ ತರಬೇತಿಯನ್ನು ಪಡೆಯಬಹುದಾಗಿದೆ.
ಸ್ವ ಉದ್ಯೋಗದ ಕನಸಿನಲ್ಲಿರುವ ಯುವಕರಿಗೊಂದು ಸುವರ್ಣಾವಕಾಶ! ಹೈನುಗಾರಿಕೆ, ಆಡು, ಕುರಿ, ಆಡು ಹಾಗೂ ಹಂದಿ ಸಾಕಾಣಿಕೆ ಕುರಿತ ತರಬೇತಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಈ ಕೆಳಗಿನ ವಿವರದಂತೆ ಅರ್ಜಿ ಸಲ್ಲಿಸಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ‘ಪಶು ಮಿತ್ರ’ ಕಾರ್ಯಕ್ರಮ ತರಬೇತಿಗಾಗಿ ಕೂಡಲೇ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರದ ಕಾರ್ಯಕ್ರಮ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಗ್ರಾಮೀಣ ಮಂತ್ರಾಲಯ ಹಾಗೂ ಇತರೆ 8 ಸಚಿವಾಲಯಗಳೊಂದಿಗೆ ಹಮ್ಮಿಕೊಂಡಿರುವ ‘ಆಜಾದಿ ಸೇ ಅಂತ್ಯೋದಯ್ ತಕ್’ ಎಂಬ ಚಳುವಳಿ ಪ್ರಯುಕ್ತ ಕರ್ನಾಟಕ ಸೇರಿದಂತೆ ಒಟ್ಟು 28 ರಾಜ್ಯಗಳ 75 ಜಿಲ್ಲೆಗಳಲ್ಲಿ “ಪಶು ಮಿತ್ರ” ತರಬೇತಿಯನ್ನು ಆಯೋಜಿಸಲು ನಿರ್ಧರಿಸಿದೆ. ತರಬೇತಿ ಕಾರ್ಯಕ್ರಮದಡಿ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಆಯ್ಕೆಯಾಗಿರುವುದು ವಿಶೇಷ.
ಪಶು ಇಲಾಖೆಯಿಂದಲೇ ತರಬೇತಿ ಆಸಕ್ತ ಅರ್ಜಿದಾರ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಗ್ರಾಮೀಣ ಪ್ರದೇಶದಲ್ಲಿಯೇ ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಇಲಾಖೆಯು 60 ದಿನಗಳ ಪಶುಮಿತ್ರ ಕಾರ್ಯಕ್ರಮದಡಿ ತರಬೇತಿ ನೀಡುತ್ತದೆ. ತರಬೇತಿಯಲ್ಲಿ ಹೈನುಗಾರಿಕೆ ವಿಧಾನ, ಸಾಕು ಪ್ರಾಣಿಗಳಿಗೆ ಬೇಕಾದ ಆಹಾರ ಪದ್ಧತಿ, ಸಾಕುವ ವಿಧಾನ, ಪ್ರಾಣಿಗಳ ಸಾಮರ್ಥ್ಯ ಹೆಚ್ಚಿಸುವ ಪದ್ಧತಿ ಹಾಗೂ ಹಸು, ಕುರಿ, ಆಡುಗಳ ತಳಿ ಪ್ರಭೇದಗಳ ಬಗ್ಗೆ ಮಾಹಿತಿ ನೀಡಲಾಗುವುದು. ಹಾಗೂ ಪ್ರಾಯೋಗಿಕವಾಗಿಯೂ ತರಬೇತಿಯನ್ನು ಕಲ್ಪಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು. ಕನ್ನಡ ಭಾಷೆಯನ್ನು ಓದಲು ಹಾಗೂ ಬರೆಯಲು ಸಾಮರ್ಥ್ಯವುಳ್ಳವರಾಗಿರಬೇಕು.
ಅಭ್ಯರ್ಥಿಗಳು ವೆಬ್ ಸೈಟ್ ಅಥವಾ ಪತ್ರದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸ ಬಯಸುವವರು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಂಚೆ ಮೂಲಕ ಅರ್ಜಿ ಹಾಕುವವರು ಕಡ್ಡಾಯವಾಗಿ ಬಿಳಿ ಹಾಳೆಯಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆ, ಶೈಕ್ಷಣಿಕ ಅರ್ಹತೆಗಳನ್ನು ನಮೂದಿಸಿ ಅದನ್ನುಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ವಿಳಾಸ ಹೀಗಿದೆ.
ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ 574 240, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 08256-236404 9448484237, 9980885900, 9900793675, 9591044014, 9620303286 ಸಂಪರ್ಕಿಸಬಹುದಾಗಿದೆ.