ಪ್ರವಾದಿ ಅವಹೇಳನ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!! ಸಮಸ್ತ ಸಂಘಟನೆ ಕಡಬದ ವತಿಯಿಂದ ಮನವಿ

Share the Article

ಪ್ರವಾದಿ ಮಹಮ್ಮದ್ ಪೈಗಂಬರ್ (ಸ. ಅ ) ರ ಬಗ್ಗೆ ಅವಹೇಳನಕಾರಿ ಭಾಷಣ ಮಾಡುವವರ ವಿರುದ್ಧ ಹಾಗೂ ಪ್ರವಾದಿ ನಿಂದನೆ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಡಬದ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮತ್ತು ಪೊಲೀಸ್ ಠಾಣಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗೆ ಕಡಬ ತಾಲೂಕು ಸಮಸ್ತ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಪ್ರಮುಖರಾದ ಮಹಮ್ಮದ್ ಜಿಫ್ರಿ ತಂಗಳ್ ಆತೂರ್, ಹಾಜಿ ಪಿ.ಎಂ ಇಬ್ರಾಹಿಂ ಧಾರಿಮಿ ಕಡಬ,ಹಾಜಿ ಅಬ್ದುಲ್ ಖಾದರ್, ಹಾಜಿ ಹಮೀದ್, ಟಿ.ಎಚ್ ಶರೀಫ್ ದಾರಿಮಿ,ಹಾಜಿ ಕೆ.ಎಂ ಹನೀಫ್, ಹಾಜಿ ಎಸ್. ಎ,ಅಬ್ಬಾಸ್, ಆದಂ ಅಡ್ಕಡಿ, ಬದುರುದ್ದಿನ್ ಮುಸ್ಲಿಯಾರ್, ಇಸ್ಮಾಯಿಲ್ ಕಲಾರ, ಅಶ್ರಫ್ ಮುಸ್ಲಿಯಾರ್ ನೆಕ್ಕರೆ, ಕಲೀಂ ಪನ್ಯ,ಅಶ್ರಫ್ ಶೇಡಿಗುಂಡಿ ಮೊದಲಾದವರು ಉಪಸ್ಥಿತರಿದ್ದರು.

Leave A Reply