ಇಂದು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ; ಇಲ್ಲಿದೆ ವಿವರ
ವಿಧಾನಪರಿಷತ್ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆದಿದ್ದು, 49 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು, ಇಂದು ಫಲಿತಾಂಶ ಹೊರಬೀಳಲಿದೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿ ಸಂಜೆಯ ಹೊತ್ತಿಗೆ ಪೂರ್ಣ ಫಲಿತಾಂಶ ದೊರೆಯುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಯಾರು ಯಾರು ಸ್ಪರ್ಧೆ?
ಪಶ್ಚಿಮ ಶಿಕ್ಷಕರ ಕ್ಷೇತ್ರ
ಬಿಜೆಪಿ-ಬಸವರಾಜ ಹೊರಟ್ಟಿ
ಕಾಂಗ್ರೆಸ್-ಬಸವರಾಜ ಗುರಿಕಾರ
ಜೆಡಿಎಸ್ -ಶ್ರೀಶೈಲ ಗಡದಿನ್ನಿ
ವಾಯುವ್ಯ ಪದವೀಧರ ಕ್ಷೇತ್ರ
ಬಿಜೆಪಿ-ಹಣಮಂತ ನಿರಾಣಿ
ಕಾಂಗ್ರೆಸ್-ಸುನೀಲ ಸಂಕ
ದಕ್ಷಿಣ ಪದವೀಧರ ಕ್ಷೇತ್ರ
ಬಿಜೆಪಿ-ಎಂ.ವಿ. ರವಿಶಂಕ್
ಕಾಂಗ್ರೆಸ್-ಜಿ.ಎಂ. ಮಧು
ಜೆಡಿಎಸ್-ಎಚ್.ಕೆ. ರಾಮು
ಕನ್ನಡ ಚಳವಳಿ ಪಕ್ಷ-ವಾಟಾಳ್ ನಾಗರಾಜ್
ವಾಯುವ್ಯ ಶಿಕ್ಷಕರ ಕ್ಷೇತ್ರ
ಬಿಜೆಪಿ- ಅರುಣ್ ಶಹಾಪುರ
ಕಾಂಗ್ರೆಸ್-ಪ್ರಕಾಶ್ ಹುಕ್ಕೇರಿ
ಜೆಡಿಎಸ್-ಚಂದ್ರಶೇಖರ್ ಲೋಣಿ
75 ಸದಸ್ಯ ಬಲದ ವಿಧಾನಪರಿಷತ್ ನಲ್ಲಿ ಬಹುಮತಕ್ಕೆ 38 ಸದಸ್ಯ ಬಲವಿರಬೇಕು. ಇತ್ತೀಚೆಗೆ ನಡೆದ ವಿಧಾನಸಭೆಯಿಂದ ವಿಧಾನಪರಿಷತ್ ಗೆ ಆಯ್ಕೆಯಾದ ನಾಲ್ಕು ಸದಸ್ಯರನ್ನು ಸೇರಿದಂತೆ ಬಿಜೆಪಿ ಬಲ ಸದ್ಯ 36 ಇದೆ. ಸಿ.ಎಂ. ಇಬ್ರಾಹಿಂ ರಾಜೀನಾಮೆಯಿಂದ ಕಾಂಗ್ರೆಸ್ 24, ಜೆಡಿಎಸ್ 7 ಸದಸ್ಯರನ್ನು ಹೊಂದಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಇಬ್ಬರು ಸದಸ್ಯರ ಕೊರತೆ ಎದುರಿಸುತ್ತಿದೆ. ಹೀಗಾಗಿ 2 ಕ್ಷೇತ್ರಗಳಲ್ಲಿ ಗೆದ್ದರೆ ಮಾತ್ರ ಬಿಜೆಪಿ ಬಹುಮತ ಪಡೆಯಲು ಸಾಧ್ಯ.