ಮಂಗಳೂರು: ಆಪತ್ತಿನಲ್ಲಿರುವ ಮೂಕಪ್ರಾಣಿಗಳ ಪಾಲಿನ ತಾಯಿ ಮತ್ತೊಮ್ಮೆ ಸುದ್ದಿಯಲ್ಲಿ!! ಏಳನೇ ಮಹಡಿಯಿಂದ ಬಿದ್ದ ಬೆಕ್ಕನ್ನು ರಕ್ಷಿಸಿದ ರಜನಿ ಶೆಟ್ಟಿ

Share the Article

ಮೂಕಪ್ರಾಣಿಗಳ ಪಾಲಿನ ತಾಯಿ,ತನ್ನ ಮನೆಯಲ್ಲೇ ಹಲವಾರು ರೀತಿಯ ಮೂಕಪ್ರಾಣಿಗಳನ್ನು ಸಾಕಿ,ಸಲಹಿ ಆಶ್ರಯ ನೀಡುತ್ತಿರುವ ಮಹಿಳೆಯೊಬ್ಬರು ಆಪತ್ತಿನಲ್ಲಿರುವ ಪ್ರಾಣಿಗಳ ರಕ್ಷಣೆ ಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತರು.

ಹೌದು, ಮಂಗಳೂರಿನ ಮೂಕಪ್ರಾಣಿಗಳ ಪಾಲಿನ ತಾಯಿ ರಜನಿ ಶೆಟ್ಟಿ ಅವರು ಸಾಹಸ ಮೆರೆದು ಬೆಕ್ಕೊಂದನ್ನು ರಕ್ಷಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಅಪಾರ್ಟ್ಮೆಂಟ್ ಒಂದರ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು, ಹೊರಬರಲಾರದೇ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ಸಾಹಸ ಮೆರೆದು ರಕ್ಷಿಸಿದ್ದಾರೆ. ಪರ್ಷಿಯನ್ ತಳಿಯ ಬೆಕ್ಕು ಇದಾಗಿದ್ದು, ಅಪಾರ್ಟ್ಮೆಂಟ್ ನಲ್ಲಿರುವ ಕುಟುಂಬವೊಂದು ಈ ಬೆಕ್ಕನ್ನು ಸಾಕಿದ್ದು, ಮನೆ ಮಂದಿ ಇಲ್ಲದ ವೇಳೆಯಲ್ಲಿ ಘಟನೆ ನಡೆದಿತ್ತು.

Leave A Reply