ಫುಟ್ಬಾಲ್ ಪಂದ್ಯಾಟದಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ಭಾರತ-ಅಫ್ಘಾನ್ ಆಟಗಾರರು !!- ವೀಡಿಯೋ ವೈರಲ್

2023 ಏಷ್ಯನ್ ಕಪ್ ಕ್ವಾಲಿಫೈಯರ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡದ ಆಟಗಾರರು ಯರ್ರಾಬಿರ್ರಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಕೋಲ್ಕತ್ತಾದಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತ ತಂಡ ಕೊನೆಯ ಕ್ಷಣಗಳಲ್ಲಿ ಗೋಲು ಗಳಿಸಿ ಜಯ ಸಾಧಿಸಿತು. ಇದನ್ನು ಅರಗಿಸಿಕೊಳ್ಳಲಾಗದೆ ಹತಾಶೆಯಿಂದ ಅಫ್ಘಾನ್ ಆಟಗಾರರು ಭಾರತದ ಆಟಗಾರರ ಜತೆ ವಾಗ್ದಾಳಿ ನಡೆಸಿದರು. ಆರಂಭದಲ್ಲಿ ಇಬ್ಬರು-ಮೂವರು ಆಟಗಾರರ ನಡುವೆ ಜಟಾಪಟಿ ಆರಂಭವಾದರೂ ಕ್ರಮೇಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಕಡೆಯ ಅರ್ಧಕ್ಕೂ ಹೆಚ್ಚು ಆಟಗಾರರು ಈ ಹೊಡೆದಾಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬೆಂಚ್ ಮೇಲೆ ಕುಳಿತ ಆಟಗಾರರು ಕೂಡ ಮೈದಾನಕ್ಕೆ ಬಂದರು.

ಈ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿತ್ತು. ಎರಡೂ ತಂಡಗಳ ನಡುವೆ ಸಮಬಲದ ಪೈಪೋಟಿ ಕಂಡು ಬಂದಿತ್ತು. 84 ನಿಮಿಷಗಳವರೆಗೆ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 85ನೇ ನಿಮಿಷದಲ್ಲಿ ಭಾರತದ ಸುನಿಲ್ ಛೆಟ್ರಿ ಫ್ರೀ ಕಿಕ್ ನಲ್ಲಿ ಗೋಲು ಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅದಾಗ್ಯೂ, ಈ ಮುನ್ನಡೆ ಕೇವಲ 3 ನಿಮಿಷಗಳ ಕಾಲ ಉಳಿಯಿತು. ನಂತರ ಅಫ್ಘಾನ್ ಆಟಗಾರ ಜುಬೈರ್ ಅಮಿರಿ 88ನೇ ನಿಮಿಷದಲ್ಲಿ ಹೆಡರ್ ಮಾಡಿ ಪಂದ್ಯವನ್ನು ಸಮಬಲಗೊಳಿಸಿದರು. ಭಾರತದ ಅಬ್ದುಲ್ ಸಮದ್ ಕೊನೆಯ ಕ್ಷಣದಲ್ಲಿ ಅದ್ಭುತ ಗೋಲು ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.

ಏಷ್ಯನ್ ಕಪ್ 2023ರ ಅಂತಿಮ ಅರ್ಹತಾ ಸುತ್ತಿನಲ್ಲಿ, ಗ್ರೂಪ್-ಡಿ ಪಂದ್ಯದಲ್ಲಿ ಭಾರತ ತಂಡವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಂಗ್ ಕಾಂಗ್ ಮೊದಲ ಸ್ಥಾನದಲ್ಲಿದೆ.

https://twitter.com/mattathil777777/status/1535834931904991232?s=20&t=16GoSurnMBo4mEmEuTo88g

Leave A Reply

Your email address will not be published.