ವಸ್ತ್ರಾಪಹರಣ ದೃಶ್ಯದಲ್ಲಿ ದ್ರೌಪದಿ ಬದಲು ಸೀತಾದೇವಿ ಹೆಸರು ಹೇಳಿ ಪೇಚಿಗೆ ಸಿಲುಕಿದ ಕಾಂಗ್ರೆಸ್ ನಾಯಕ- ವೀಡಿಯೋ ವೈರಲ್

ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ತನ್ನ ಹೇಳಿಕೆಯಿಂದ ಪೇಚಿಗೆ ಸಿಲುಕಿದ ಘಟನೆಯೊಂದು ನಡೆದಿದೆ. ಮಹಾಭಾರತದಲ್ಲಿ ವಸ್ತ್ರಾಪಹರಣ ದೃಶ್ಯವನ್ನು ಉದಾಹರಣೆಗೆ ತೆಗೆದುಕೊಳ್ಳಲು ಹೋಗಿ ದ್ರೌಪದಿ ಬದಲಿಗೆ ಸೀತಾದೇವಿಯ ಹೆಸರು ಹೇಳಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ಸಂಸ್ಥೆಗಳು, ಇಡಿ, ಸಿಬಿಐ ಮತ್ತು ಆದಾಯ ತೆರಿಗೆಯಂತಹ ತನಿಖಾ ಸಂಸ್ಥೆಗಳು ಕೇಂದ್ರ ಅಪಖ್ಯಾತಿಗೊಳಿಸಿದೆ. ಕೇಂದ್ರವು ಎಲ್ಲಾ ಸಂಸ್ಥೆಗಳ ಮಹತ್ವವನ್ನು ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಈ ಚುನಾವಣೆಯಲ್ಲಿ ಸತ್ಯ, ಪ್ರಜಾಪ್ರಭುತ್ವ, ಕಾನೂನು ಮತ್ತು ನೈತಿಕತೆ ಗೆಲ್ಲುತ್ತದೆ. ಸೀತಾದೇವಿಯ ವಸ್ತ್ರಾಪಹರಣದಂತೆ ಬಿಜೆಪಿ ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡಲು ಬಯಸುತ್ತದೆ. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಅವರ ಮುಖವಾಡ ಕಳೆದುಕೊಳ್ಳುತ್ತದೆ ಎಂದು ಹೇಳಿದರು.

ಮಹಾಭಾರತದಲ್ಲಿ ರಾಜ ಧೃತರಾಷ್ಟ್ರನ ಆಸ್ಥಾನದಲ್ಲಿ ಪಂಚಪಾಂಡವರು ಸೇರಿದಂತೆ ಗಣ್ಯರ ಮುಂದೆ ಇಡೀ ಸಭೆಯಲ್ಲಿ ದ್ರೌಪದಿ ವಸ್ತ್ರಾಪಹರಣ ಮಾಡಲಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಲು ಹೋಗಿ ರಣದೀಪ್ ಅವರು ದ್ರೌಪದಿ ಬದಲಿಗೆ ಸೀತಾದೇವಿಯ ಹೆಸರು ಹೇಳಿದ್ದಾರೆ.

ಸುರ್ಜೆವಾಲಾ ಅವರ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ರಾಮನ ಅಸ್ತಿತ್ವವನ್ನು ನಿರಾಕರಿಸುತ್ತಿದೆ ಎಂದು ವ್ಯಂಗ್ಯವಾಡಿದೆ. ಅಲ್ಲದೇ ಹಲವು ಕಡೆಗಳಿಂದ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.

Leave A Reply

Your email address will not be published.