ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 30
ರೈತರಿಗೆ ಉಪಯೋಗ ಆಗುವ ನಿಟ್ಟಿನಿಂದ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಉತ್ತಮವಾದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ. ಇದೀಗ ಹಾಸನ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿನ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಇಲಾಖೆಯು ಯಾವ ಯೋಜನೆಯ ಪ್ರಯೋಜನವನ್ನು ಪಡೆಯಲು ಸಹಾಯಧನ ನೀಡುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ:
- ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆ:
ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ (ಕಂದು ಬಾಳೆ, ಅಂಗಾಂಶ ಕೃಷಿ ಬಾಳೆ, ಬೆಣ್ಣಿಹಣ್ಣು ಮತ್ತು ಕಾಳುಮೆಣಸು) ಹಾಗೂ ಕಾಳು ಮೆಣಸು ಪುನಶ್ವೇತನ, ಪ್ಯಾಕ್ ಹೌಸ್ ನಿರ್ಮಾಣ, ಸೋಲಾರ್ ಟನಲ್ ಡೈಯರ್, ಮಿನಿಟ್ರ್ಯಾಕ್ಟರ್ಗೆ ಸಹಾಯಧನವನ್ನು ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆ ಅಡಿ ಕೃಷಿಕರು ಪಡೆದುಕೊಳ್ಳಬಹುದಾಗಿದೆ. - ರಾಷ್ಟ್ರೀಯ ಕೃಷಿ ವಿಳಾಸ ಯೋಜನೆ:
ಈ ಯೋಜನೆಯ ಅಡಿ ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ನೀಡಲು, ನೀರಿನಲ್ಲಿ ಕರಗುವ ರಸಗೊಬ್ಬರ ಹಾಗೂ ಲಘುಪೋಷಕಾಂಶಗಳ ಮಿಶ್ರಣವನ್ನು ಶೇ.25% ರಂತೆ ವಿತರಿಸಲಾಗುವುದು. ಸುರಂಗ ಮಾದರಿಯ ಪಾಲಿಮನೆ ನಿರ್ಮಾಣಕ್ಕೆ ಸಹಾಯಧನವನ್ನು ಸಹ ವಿತರಣೆ ಮಾಡಲಾಗುವುದು. - ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ:
ಕೃಷಿಕರು ತಮ್ಮ ಕೃಷಿ ಜಮೀನಿನಲ್ಲ ಗುಚ್ಚ ಮಾದರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರದೇಶ ವಿಸ್ತರಣೆಗೆ ಸಹಾಯಧನವನ್ನುಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ಒದಗಿಸಲಾಗುವುದು. ಜೊತೆಗೆ ಕಾಳುಮೆಣಸು ಬೆಳೆಯಲು ಪ್ರದೇಶ ವಿಸ್ತರಣೆ, ಅಡಿಕೆಯಲ್ಲಿ ಅಂತರ ಬೆಳೆಗಾಗಿ ಸಹಾಯಧನ ನೀಡಲಾಗುವುದು. ಕಾಳುಮಣಸು ಬೆಳೆಯ ಪ್ರದೇಶ ವಿಸ್ತರಣೆ ತೆಂಗಿನಲ್ಲಿ ಅಂತರ ಬೆಳೆಗಾಗಿ ಸಹಾಯಧನ ಒದಗಿಸಲಾಗುವುದು. ಬೆಳೆಯ ಪ್ರದೇಶ ವಿಸ್ತರಣೆ ಅಷ್ಟೇ ಅಲ್ಲದೇ ತೆಂಗು ಕೃಷಿಕರಿಗೆ ಅಂತರ ಬೆಳೆಗಾಗಿ ಸಹಾಯಧನ ವಿತರಣೆ ಮಾಡಲಾಗುವುದು. - ರಾಜ್ಯವಲಯ ಮಧುವನ ಮತ್ತು ಜೇನುಸಾಕಾಣಿಕೆ ಅಭಿವೃದ್ಧಿ ಯೋಜನೆ:
ಈ ಯೋಜನೆ ಅಡಿಯಲ್ಲಿ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ ಖರೀದಿಗೆ ಸಹಾಯಧನ ಪಡೆಯಬಹುದು.
5.ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಯೋಜನೆ:
ಕೃಷಿ ಅಗತ್ಯತೆಗಳಿಗೆ ಬಳಸಲು ಯಂತ್ರ/ಉಪಕರಣಗಳ ಖರೀದಿಗೆ ಶೇ.50% ರಷ್ಟು ಸಹಾಯಧನವನ್ನು ಈ ಯೋಜನೆಯ ಅಡಿ ರೈತರು ಪಡೆಯಬಹುದಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತದೆ. ಈ ಎಲ್ಲಾ ಯೋಜನೆಗಳಲ್ಲಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದ್ದು, ಜೂನ್ 30 ರೊಳಗೆ ಅರ್ಜಿಯನ್ನು ರೈತರು ಪಡೆದುಕೊಳ್ಳಲು ಆಲೂರು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ:ಜೂನ್ 30
ಕೃಷಿಕರು ಹೆಚ್ಚಿನ ಮಾಹಿತಿಗಳಿಗೆ ಸರ್ಕಾರಿ ಕಚೇರಿ ಕೆಲಸದ ಸಮಯದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08170-295034