ಯುವಕನಿಗೆ ಚಪ್ಪಲಿಯೇಟು ನೀಡಿದ ಬಾಲಿವುಡ್ ತಾರೆ ಸನ್ನಿಲಿಯೋನ್!! ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Share the Article

ಬಾಲಿವುಡ್ ಬೆಡಗಿ ಸನ್ನಿಲಿಯೋನ್ ತನ್ನ ಕೆಲ ಒಳ್ಳೆಯ ಕೆಲಸಗಳಿಂದ ಯುವ ಮನಸ್ಸುಗಳ ಪ್ರೀತಿ ಸಂಪಾದಿಸಿ,ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.

ದತ್ತು ಮಕ್ಕಳ ಫೋಟೋ, ಅವರೊಂದಿಗಿನ ಒಡನಾಟ ಹೀಗೆ ಹತ್ತು ಹಲವು ವಿಚಾರಗಳನ್ನು ಸದಾ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವ ಸನ್ನಿ,ತನ್ನ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೋ ಒಂದನ್ನು ಹಾಕಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಭಾರೀ ವೈರಲ್ ಆಗಿದೆ.

ಹೀಗೆ ವೈರಲ್ ಆದ ವೀಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಗಾಬರಿಯಿಂದ ಚಪ್ಪಲಿ ಎಸೆದು ಬಯ್ಯುವುದು ಕಂಡುಬರುತ್ತದೆ. ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ನಡೆದುಕೊಂಡು ಬರುತ್ತಿರುವಾಗ ಏಕಾಏಕಿ ಬಂದ ಯುವಕನೊಬ್ಬ ಸನ್ನಿಯನ್ನು ನೀರಿಗೆ ತಳ್ಳಿ ತಮಾಷೆ ಮಾಡುತ್ತಾನೆ.

ಸ್ವಿಮ್ಮಿಂಗ್ ಪೂಲ್ ನ ನೀರಿಗೆ ಬಿದ್ದು ಗಾಬರಿಗೊಂಡ ಸನ್ನಿ ಕೋಪದಿಂದಲೇ ಆತನನ್ನು ದಿಟ್ಟಿಸಿ ತನ್ನ ಎರಡೂ ಚಪ್ಪಲಿಗಳನ್ನು ಆತನಿಗೆ ಎಸೆಯುತ್ತಾರೆ. ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಮೃದು ಮನಸ್ಸಿನ ಸನ್ನಿಯ ಈ ವರ್ತನೆ ತಮಾಷೆಗಿರಬಹುದು ಎನ್ನುವುದು ನೆಟ್ಟಿಗರ, ಸಾಮಾಜಿಕ ಜಾಲತಾಣದಲ್ಲಿ ಸನ್ನಿಯ ಅಭಿಮಾನಿಗಳ ವಾದವಾಗಿದೆ.

Leave A Reply