ಬೆಳ್ತಂಗಡಿ : ಉಜಿರೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ | ಗಲಾಟೆ ಬಿಡಿಸಲು ಹೋದ ಆಟೋಚಾಲಕರಿಗೆ ಯದ್ವಾತದ್ವಾ ಹಲ್ಲೆ ಮಾಡಿದ ವಿದ್ಯಾರ್ಥಿಗಳ ತಂಡ
ಬೆಳ್ತಂಗಡಿ : ವಿದ್ಯಾರ್ಥಿಗಳ ನಡುವೆ ಆಟವಾಡುತ್ತಿದ್ದ ಸಮಯದಲ್ಲಿ ನಡೆದ ಗಲಾಟೆಯಾಗಿದ್ದ ವಿಚಾರ ತಿಳಿದು ಹೊರಗಿನ ವ್ಯಕ್ತಿಗಳು ಈ ಗಲಾಟೆ ಬಿಡಿಸಲು ಬಂದಾಗ ಅವರಿಗೆ ಹಲ್ಲೆ ಮಾಡಿದ ಘಟನೆ ಉಜಿರೆಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಉಜಿರೆ ಶಾಂತಯ್ಯ ಎಂಬ ವಿದ್ಯಾರ್ಥಿ ಮತ್ತು ಇನ್ನೊಂದು ಗುಂಪಿನ ನಡುವೆ ನಡೆದ ಗಲಾಟೆ ನಡೆದಿದ್ದು ಈ ವೇಳೆ ಗಲಾಟೆ ವಿಚಾರ ತಿಳಿದು ಬಿಡಿಸಲು ಬಂದ ಆಟೋ ಚಾಲಕರಿಬ್ಬರಿಗೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಹಲ್ಲೆ ಮಾಡಿ ಕೆಳಗೆ ಹಾಕಿ ಕಾಲಿನಿಂದ ಒದ್ದು ಗಂಭೀರ ಹಲ್ಲೆ ಮಾಡಲಾಗಿದೆ. ತಕ್ಷಣ ಗಾಯಗೊಂಡವರು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ತಕ್ಷಣ ಸ್ಥಳಕ್ಕೆ ಬಂದು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಜಿರೆ ಆಟೋ ಚಾಲಕ ಪ್ರಜ್ವಲ್ ಗೌಡ.ಕೆ.ವಿ ಎಂಬಾತನ ಮುಖ ಹಾಗೂ ಸೊಂಟಕ್ಕೆ ಕಾಲಿನಿಂದ ಹಲ್ಲೆ ಮಾಡಿದ್ದು ಗಂಭೀರ ಹಲ್ಲೆಯಿಂದ ಉಜಿರೆ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೊತೆಯಲ್ಲಿದ್ದ ಆಟೋ ಚಾಲಕ ಪೆರ್ಲದ ಜಗದೀಶ್(26) ಮತ್ತು ಡಿಗ್ರಿ ಕಾಲೇಜ್ ಪ್ರಥಮ ವರ್ಷದ ವಿದ್ಯಾರ್ಥಿ ಶಾಂತಯ್ಯ(18)ಗೆ ಸಣ್ಣಪುಟ್ಟ ಗಾಯವಾಗಿದೆ ಇವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದು ತಂಡದ ವಿದ್ಯಾರ್ಥಿಗಳಿಗೂ ಹಲ್ಲೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಸಂಬಂಧ ಕೆಲವು ವಿದ್ಯಾರ್ಥಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಸರಿಸುಮಾರು ಸಂಜೆಯ 6 ಗಂಟೆಯ ವೇಳೆಗೆ ಉಜಿರೆಯ ಸಿದ್ಧವನದ ಅಜಿತ್ ನಗರ ಎಂಬ ಪ್ರದೇಶದಲ್ಲಿ ಬಾಗಲಕೋಟೆಯ ಯುವಕನಿಗೆ ಹಲವು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ದೃಶ್ಯವನ್ನು ಅಲ್ಲಿಯ ಸ್ಥಳೀಯ ಆಟೋ ಚಾಲಕರೊಬ್ಬರು ನೋಡಿದಾಗ, ತಕ್ಷಣ ಅವರು ಪ್ರಶ್ನಿಸಿದಾಗ ಅಲ್ಲಿದ್ದವರು ಅವರಿಗೂ ಥಳಿಸಿ ಬಲವಾದ ಏಟು ನೀಡಿದ್ದಾರೆ. ಕೂಡಲೇ ಆಟೋದ ಇತರ ಗೆಳೆಯರಿಗೆ ಆಟೋಚಾಲಕ ಕಾಲ್ ಮಾಡಿದ್ದು ಅವರು ಬಂದಾಗ ಇತರರಿಗೂ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದ್ದು, ಈ ಕುರಿತು ಬೆಳ್ತಂಗಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ಆಟೋ ಚಾಲಕರು ಉಜಿರೆಯ ಬೆನಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.