ಮಂಗಳೂರು : ಚಾರ್ಜ್ ಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ದಿಢೀರ್ ಬೆಂಕಿ | ಸುಟ್ಟುಕರಕಲಾದ ಗಾಡಿ

Share the Article

ಮಂಗಳೂರು: ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ (ಇ.ವಿ.) ಬ್ಯಾಟರಿಗಳು ಸ್ಫೋಟ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಹಲವರ ಜೀವಹಾನಿಯೂ ಆಗಿದೆ. ಇದೀಗ ಮಂಗಳೂರಿನಲ್ಲಿ ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್ ಗೆ ಬೆಂಕಿ ಆಕಸ್ಮಿಕ ಕಾಣಿಸಿಕೊಂಡು, ಸುಟ್ಟು ಕರಕಲಾದ ಘಟನೆ ನಗರದ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಇಂದು ನಡೆದಿದೆ.

ಈ ಇಲೆಕ್ಟ್ರಿಕಲ್ ಸ್ಕೂಟರ್ ಚಾರ್ಜ್‌ಗೆ ಇಟ್ಟ ಕೆಲವು ಗಂಟೆಯ ಬಳಿಕ ಬೆಂಕಿ ಆಕಸ್ಮಿಕಕ್ಕೊಳಗಾಗಿ ಸ್ಫೋಟಿಸಿದೆ ಎಂದು ತಿಳಿದುಬಂದಿದೆ. ಸ್ಕೂಟರ್‌ನ ಯಂತ್ರಗಳು ಸಂಪೂರ್ಣ ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ.

Leave A Reply