ಬೆಳ್ತಂಗಡಿ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನ ಸಾಗಾಟಕ್ಕೆ ಬಜರಂಗದಳ ಕಾರ್ಯಕರ್ತರಿಂದ ದಾಳಿ

ಬೆಳ್ತಂಗಡಿ : ಗೋ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಪೊಲೀಸರು ಯಾವುದೇ ರೀತಿಯ ಕ್ರಮ ತಗೊಂಡರೂ ಗೋಕಳ್ಳರು ತಮ್ಮ ಈ ಕಳ್ಳ ದಂಧೆಯನ್ನು ನಿಲ್ಲಿಸುವ ಪರಿ ಕಾಣುವುದಿಲ್ಲ. ಇದರ ಮುಂದುವರಿದ ಭಾಗವಾಗಿ ನಿನ್ನೆ ಕೂಡಾ ಗೋ ಕಳ್ಳತನ ಪ್ರಕರಣವೊಂದು ನಡೆದಿದೆ.

 

ನಿನ್ನೆ ರಾತ್ರಿ 10.30 ರ ವೇಳೆಗೆ ಇಂದಬೆಟ್ಟು ಗ್ರಾಮದ ಪೆರಲ್ದಪಲ್ಕೆ ನೇತ್ರಾವತಿ ನಗರ ಭಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ದನ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಹಸುವನ್ನು ರಕ್ಷಿಸಿದ್ದಾರೆ.

ಓರ್ವ ಆರೋಪಿ ಸುನಿಲ್ ಬೆದ್ರಪಲ್ಕೆ, ಇನ್ನೂಬ್ಬ ಆರೋಪಿ ಪರಾರಿ ಯಾಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಠಾಣೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹಸುವನ್ನು ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿದೆ.

Leave A Reply

Your email address will not be published.