ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮತ್ತೊಂದು ಎಡವಟ್ಟು ಬಯಲು!
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಅನೇಕ ಎಡವಟ್ಟುಗಳು ಹೊರ ಬರುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಸಮಿತಿಯು ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಹೌದು.ಒಂದೇ ಪದ್ಯವನ್ನು ಎರಡೆಡೆರಡು ತರಗತಿಗಳಿಗೆ ಪಠ್ಯಪುಸ್ತಕದಲ್ಲಿ ಇರಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೂ ಎಡೆಮಾಡಿಕೊಟ್ಟಿದೆ.
ಕವಿ ಬಿ.ಎಂ ಶರ್ಮಾ ಎಂಬುವರು ಬರೆದಿರುವಂತ ‘ಬಾವಿಯಲ್ಲಿ ಚಂದ್ರ’ ಪದ್ಯವನ್ನು 3ನೇ ತರಗತಿ ಹಾಗೂ 4ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಮುದ್ರಣ ಮಾಡಲಾಗಿದ್ದು, ಈ ಮೂಲಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮತ್ತೊಂದು ಎಡವಟ್ಟು ಬಯಲಾಗಿದೆ.
ಅಂದಹಾಗೇ ಈ ಹಿಂದಿನ ಬರಗೂರು ರಾಮಚಂದ್ರಪ್ಪ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು 3ನೇ ತರಗತಿಯ ನಲಿ – ಕಲಿ ಭಾಗವಾಗಿ ಕನ್ನಡ ಪುಸ್ತಕದಲ್ಲಿ ಬಿ.ಎಂ ಶರ್ಮಾ ಅವರ ಬಾವಿಯಲ್ಲಿ ಚಂದ್ರ ಪದ್ಯವನ್ನು ಇರಿಸಲಾಗಿತ್ತು. ಇದೇ ಪದ್ಯವನ್ನು ರೋಹಿತ್ ಚಕ್ರತೀರ್ಥ ಅವರ ಸಮಿತಿಯು, ಈಗ 4ನೇ ತರಗತಿ ಪಠ್ಯದಲ್ಲಿ ಮುದ್ರಿಸಿದೆ. ಈ ಮೂಲಕ ಒಂದೇ ಪಠ್ಯ ಮೂರು ಮತ್ತು ನಾಲ್ಕನೇ ತರಗತಿ ಪಠ್ಯಪುಸ್ತಕದಲ್ಲಿ ಮುದ್ರಣಗೊಂಡು ಗೊಂದಲವನ್ನುಂಟು ಮಾಡಿದೆ.