ಜೆಸಿಐ ಸುಳ್ಯ ಸಿಟಿ ಮಡಿಲಿಗೆ ಹಲವು ಪ್ರಶಸ್ತಿಗಳು

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ನಡೆದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಸುಳ್ಯ ಸಿಟಿಯು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು ಜೆಸಿಐ ವಲಯ 15ರ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತ ವಲಯದ ಪ್ರಥಮ ಮಹಿಳೆ ಮಾರಿಯಾ ರೋಯನ್ ಉಪಾಧ್ಯಕ್ಷರಾದ ರವಿಚಂದ್ರ ಪಾಟಾಳಿ,ದೀಪಕ್ ಗಂಗೋಲಿ,ಸ್ವಾತಿ ರೈ, ಪ್ರಶಾಂತ್ ಲೈಲಾ ಪೂರ್ವ ಅಧ್ಯಕ್ಷರುಗಳು ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಅತ್ಯುತ್ತಮ ಘಟಕಾದ್ಯಕ್ಷ ರನ್ನರ್ ಮತ್ತು ಹಲವು ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.

 

ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿಯ ಅಧ್ಯಕ್ಷರಾದ ಬಶೀರ್ ಯುಪಿ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು ಸ್ಥಾಪಕ ಮನಮೋಹನ್ ಬಳ್ಳಡ್ಕ ಸದಸ್ಯರುಗಳಾದ ಗೋಪಾಲಕೃಷ್ಣ ಪೆರ್ಲಂಪಾಡಿ ಮತ್ತು ಶಾಫಿ ಕಲ್ಲೇರಿ ಉಪಸ್ಥಿತರಿದ್ದರು.

Leave A Reply

Your email address will not be published.