‘ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ’ದ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಪಿಯು ಬೋರ್ಡ್

Share the Article

ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಂತ ವಿದ್ಯಾರ್ಥಿಗಳಿಗೆ, ಪಿಯು ಬೋರ್ಡ್ ಮಹತ್ವದ ಮಾಹಿತಿ ನೀಡಿದೆ. ಜೂನ್ 24 ರಿಂದ 28ರೊಳಗೆ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಿಸೋದಾಗಿ ತಿಳಿಸಿದೆ.

ಈಗಾಗಲೇ ಜೂನ್ 3ನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಿಸೋದಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ತಿಳಿಸಿತ್ತು. ಆದರೆ ಮೌಲ್ಯ ಮಾಪನ ತಡವಾದ್ರೆ ಇನ್ನೂ ವಿಳಂಬವಾಗಲಿದೆ ಎನ್ನಲಾಗಿತ್ತು. ಜೂನ್ 28ರೊಳಗೆ ಫಲಿತಾಂಶ ಪ್ರಕಟಿಸೋದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಾರದಂತ ರಾಮಚಂದ್ರನ್ ತಿಳಿಸಿದ್ದಾರೆ.

ಜೂನ್ 3ನೇ ವಾರದಲ್ಲೇ ಫಲಿತಾಂಶ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಆ ನಿರೀಕ್ಷೆಯಂತೆ ಮೌಲ್ಯಮಾಪನ ಕಾರ್ಯವೂ ಈಗ ನಡೆಯುತ್ತಿದೆ. ಮೌಲ್ಯಮಾಪನ ತಡವಾದರೆ ಮಾತ್ರ ಜೂನ್ 4ನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸೋದಾಗಿ ಸ್ಪಷ್ಟ ಪಡಿಸಿದ್ದಾರೆ.

Leave A Reply