ಅದ್ಧೂರಿಯಾಗಿ ನಡೆಯಿತು ಕ್ರಿಕೆಟ್ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಕ್ರಿಕೆಟಿಗನ ಮದುವೆ !! | ಫಾಸ್ಟ್ ಬೌಲರ್ ಗೆ ಕ್ಲೀನ್ ಬೌಲ್ಡ್ ಆದ ಕಾರ್ಪೋರೇಟ್ ಸಂಸ್ಥೆಯ ಉದ್ಯೋಗಿ

ಭಾರತೀಯ ಕ್ರಿಕೆಟಿಗ, ವೇಗದ ಬೌಲರ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹಾರ್, ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲ್ಲರೆದುರು ಪ್ರೇಮ ನಿವೇದನೆ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಆಗ್ರಾದ ಹೋಟೆಲ್‌ನಲ್ಲಿ ದೀರ್ಘಕಾಲದ ಗೆಳತಿ, ಪ್ರೇಯಸಿ ಜಯಾ ಭಾರದ್ವಾಜ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.

 

ಆಗ್ರಾದ ವಾಯು ವಿಹಾರ್ ನಿವಾಸಿಗಳಾದ ಚಹಾರ್ ಮತ್ತು ಜಯಾ ಅವರು ಫತೇಹಾಬಾದ್ ರಸ್ತೆಯಲ್ಲಿರುವ ಜೇಪೀ ಪ್ಯಾಲೇಸ್ ಹೋಟೆಲ್‌ನಲ್ಲಿ ವಿವಾಹ ಅದ್ಧೂರಿಯಾಗಿ ನೆರವೇರಿತು. ದೀಪಕ್ ಅವರ ವಿವಾಹದ ಮೊದಲಿನ ಅರಿಶಿಣ ಶಾಸ್ತ್ರ ಮತ್ತು ಸಂಗೀತ ಸಮಾರಂಭದ ಫೋಟೋವನ್ನು ತಮ್ಮ ಇನ್‌ ಸ್ಟಾಗ್ರಾಮ್ ಖಾತೆಯಲ್ಲಿ ರಾಹುಲ್ ಚಹಾರ್ ಹಂಚಿಕೊಂಡಿದ್ದಾರೆ.

ವಿವಾಹದಲ್ಲಿ ದೀಪಕ್ ಬಿಳಿ ಶೆರ್ವಾನಿ ಮತ್ತು ಪೇಟವನ್ನು ಧರಿಸಿ ಮಿಂಚಿದರೆ, ಕ್ರೀಮ್ ಬಣ್ಣದ ಲೆಹೆಂಗಾ ತೊಟ್ಟು ಜಯಾ ಹಸೆಮಣೆ ಏರಿದ್ದಾರೆ. ಮನೀಷ್ ಮಲ್ಹೋತ್ರಾ ಅವರು ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಅವರ ಮದುವೆಯ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ.

ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ದೀಪಕ್ ಚಾಹರ್ ಅವರು ಜಯಾ ಭಾರದ್ವಾಜ್ ಅವರ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಜಯಾ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Leave A Reply

Your email address will not be published.