ಪೋಷಕರ ವಿರೋಧದ ನಡುವೆ ಓಡಿಹೋಗಿ ಮದುವೆಯಾದ ಜೋಡಿ| ಪೊಲೀಸರೆಂದು ಹೇಳಿ 20 ಜನ ತಂಡದಿಂದ ಏಕಾಏಕಿ ದಾಳಿ| ಈಗ ಮದುಮಗಳು ಎಲ್ಲಿದ್ದಾಳೆ ಗೊತ್ತಾ?

ಮನೆಯವರ ವಿರೋಧದಿಂದ ಮದುವೆಯಾಗಿ ಗಂಡನ ಮನೆಯಲ್ಲಿರುವಾಗಲೇ ಹುಡುಗಿ ಹೆತ್ತವರು ಬಂದು ಗಲಾಟೆ, ರಂಪಾಟ ಮಾಡಿ ಹುಡುಗಿನಾ ಎತ್ತಾಕ್ಕೊಂಡು ಹೋಗೋ ಎಷ್ಟೋ‌‌ ಘಟನೆಗಳನ್ನು ನಾವು ಕೇಳಿದ್ದೇವೆ. ಅಥವಾ ಕಣ್ಣಾರೆ ಕಂಡಿದ್ದೇವೆ ಕೂಡಾ. ಅಂಥಹುದೇ ಒಂದು ಘಟನೆ ಈಗ ಮತ್ತೊಮ್ಮೆ ನಡೆದಿದೆ. ಹಾಗಾದರೆ ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಪೊಲೀಸರಿಂದ ರಕ್ಷಣೆ ಇಲ್ಲವೇ ? ಇಂಥದ್ದೇ ಒಂದು ಘಟನೆ ಮತ್ತೆ ಮರುಕಳಿಸಿದೆ.ಮನೆಯವರ ವಿರೋಧದಿಂದ ಮದುವೆಯಾಗಿ ಗಂಡನ ಮನೆಯಲ್ಲಿರುವಾಗಲೇ ಹುಡುಗಿ ಹೆತ್ತವರು ಬಂದು ಗಲಾಟೆ, ರಂಪಾಟ ಮಾಡಿ ಹುಡುಗಿನಾ ಎತ್ತಾಕ್ಕೊಂಡು ಹೋಗೋ ಎಷ್ಟೋ‌‌ ಘಟನೆಗಳನ್ನು ನಾವು ಕೇಳಿದ್ದೇವೆ. ಅಥವಾ ಕಣ್ಣಾರೆ ಕಂಡಿದ್ದೇವೆ ಕೂಡಾ. ಅಂಥಹುದೇ ಒಂದು ಘಟನೆ ಈಗ ಮತ್ತೊಮ್ಮೆ ನಡೆದಿದೆ. ಹಾಗಾದರೆ ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಪೊಲೀಸರಿಂದ ರಕ್ಷಣೆ ಇಲ್ಲವೇ ? ಇಂಥದ್ದೇ ಒಂದು ಘಟನೆ ಮತ್ತೆ ಮರುಕಳಿಸಿದೆ.

ಪ್ರೀತಿಸಿ ಮದುವೆಯಾದ ನಂತರ ಗಂಡನ ಮನೆಯಲ್ಲಿದ್ದ ಮದುಮಗಳನ್ನು ಆಕೆಯ ಪಾಲಕರು ಅಪಹರಿಸಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ. ಹೊಸದಾಗಿ ಮದುವೆಯಾದ ಈ ಜೋಡಿ ಹುಡುಗನ ಅಕ್ಕನ ಮನೆಯಲ್ಲಿದ್ದಾಗ ದಾಳಿ ನಡೆದಿದೆ‌. ಮದುಮಗಳನ್ನು ಆಕೆಯ ಪಾಲಕರೇ ಅಪಹರಿಸಿದ್ದಾರೆ.

ಕಳೆದ ಮೇ. 25 ರಂದು ಜಲಜಾ ಎಂಬಾಕೆ ಗಂಗಾಧರ್‌ನೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿ, ಮೇ.30 ರಂದು ನೆಲಮಂಗಲದ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿದ್ದಾರೆ.

ಗಂಗಾಧರ್ ಹಾಗೂ ಜಲಜಾ ಇಬ್ಬರು ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ, ಮದುವೆಗೆ ಜಲಜಾ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ಪಾಲಕರನ್ನು ಎದುರು ಹಾಕಿಕೊಂಡು ಜಲಜಾ ತನ್ನ ಪ್ರಿಯಕರನನ್ನು ವರಿಸಿದ್ದಳು.

ಇದಾದ ಬಳಿಕ ನವದಂಪತಿ ಗಂಗಾಧರ್ ಅಕ್ಕನ ಮನೆಯಲ್ಲಿ ಉಳಿದಿದ್ದರು. ಬ್ಯಾಡರಹಳ್ಳಿ ಪೊಲೀಸರ ಹೆಸರೇಳಿಕೊಂಡು ಸುಮಾರು 20 ಜನರ ಗ್ಯಾಂಗ್ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿರುವ ಗಂಗಾಧರ್ ಅಕ್ಕನ ಮನೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ತಡೆಯಲು ಬಂದ ಎಲ್ಲರ ಮೇಲೆ ಹಲ್ಲೆ ಮಾಡಿ ಜಲಜಾಳನ್ನು ಅಲ್ಲಿಂದ ಅಪಹರಿಸಿದ್ದಾರೆ.

ಜಲಜಾ ತಂದೆ ದೇವರಾಜು, ಸಂಬಂಧಿ ಮಹೇಶ್ ಹಾಗೂ ಮತ್ತವರ ಗ್ಯಾಂಗ್ ವಿರುದ್ಧ ಆರೋಪ ಕೇಳಿಬಂದಿದೆ. ಗಂಗಾಧರ್ ಅಕ್ಕ ಸಾಕಮ್ಮ ಮನೆ ಮೇಲೆ ದಾಳಿ ಮಾಡಿದ್ದು, ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.