ಜೆಟ್ ಏರ್‌ವೇಸ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ !! | ಅಭ್ಯರ್ಥಿಗಳಿಗಿರಬೇಕಾದ ಅರ್ಹತೆಗಳೇನು ಗೊತ್ತೇ !?

ಈ ವರ್ಷದ ಸೆಪ್ಟೆಂಬರ್‌ನೊಳಗೆ ವಾಣಿಜ್ಯ ಸೇವೆಗಳನ್ನು ಪುನರಾರಂಭಿಸುವ ಗುರಿಯನ್ನು ಹೊಂದಿರುವ ಜೆಟ್ ಏರ್‌ವೇಸ್ ಬಹು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದೇ ವೇಳೆ ವಿಮಾನಯಾನವು ಈ ಹಿಂದಿನ ಜೆಟ್ ಏರ್ವೇಸ್ ಉದ್ಯೋಗಿಗಳಿಗೂ ಸಹ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಲಾಗಿದೆ.

ಜೆಟ್ ಏರ್‌ವೇಸ್ ಜನರಲ್ ಮ್ಯಾನೇಜರ್ (ಚಿಲ್ಲರೆ ಮತ್ತು ಕಾರ್ಪೊರೇಟ್ ಮಾರಾಟಗಳು), ಹೆಡ್ – ಗ್ರೌಂಡ್ ಆಪರೇಷನ್ ಟ್ರೈನಿಂಗ್, ಡಿಜಿಆರ್ ಇನ್‌ಸ್ಟ್ರಕ್ಟರ್ ಮತ್ತು ಪ್ಯಾಸೆಂಜರ್ ಸರ್ವಿಸ್ ಸಿಸ್ಟಮ್ (ಪಿಎಸ್‌ಎಸ್) ತರಬೇತುದಾರ ಮತ್ತು ಇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.

ಈ ಕುರಿತಾಗಿ ಜೆಟ್ ಏರ್ವೇಸ್, ‘ಇತಿಹಾಸವನ್ನು ರಚಿಸುವ ತಂಡವನ್ನು ಸೇರಲು ನಾವು ರಿಟೇಲ್ ಮತ್ತು ಕಾರ್ಪೊರೇಟ್ ಸೇಲ್ಸ್ ನಲ್ಲಿ ಜನರಲ್ ಮ್ಯಾನೇಜರ್ (GM) ನ್ನು ಹುಡುಕುತ್ತಿದ್ದೇವೆ” ಎಂದು ಟ್ವೀಟ್ ಮಾಡಿದೆ.

ಆಯ್ಕೆ ಅರ್ಹತೆಗಳು ಇಂತಿವೆ:

*ವಿಮಾನಯಾನ ಅಥವಾ ಪ್ರಯಾಣ ಉದ್ಯಮದಲ್ಲಿ ಅಭ್ಯರ್ಥಿಯು 10 ರಿಂದ 15 ವರ್ಷಗಳ ನಡುವಿನ ಅನುಭವವನ್ನು ಹೊಂದಿರಬೇಕು.
*ಸಂಭಾವ್ಯ ಗ್ರಾಹಕರು ಮತ್ತು ವ್ಯಾಪಾರ ಪಾಲುದಾರರನ್ನು ಗುರುತಿಸಲು ಅಭ್ಯರ್ಥಿಯು ತ್ವರಿತವಾಗಿರಬೇಕು ಮತ್ತು ವಾಣಿಜ್ಯ ಸಂಬಂಧಗಳನ್ನು ನಿರ್ವಹಿಸುವಲ್ಲಿ ಉತ್ತಮವಾಗಿರಬೇಕು.
*ಅಭ್ಯರ್ಥಿಯು ಪದವೀಧರರಾಗಿರಬೇಕು ಅಥವಾ ಸ್ನಾತಕೋತ್ತರ ಪದವೀಧರರಾಗಿರಬೇಕು. ಏತನ್ಮಧ್ಯೆ, ಮಾರ್ಕೆಟಿಂಗ್ ಅಥವಾ ಮಾರಾಟದಲ್ಲಿ ಎಂಬಿಎ ಮಾಡಿದ್ದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
*ಹೆಡ್-ಗ್ರೌಂಡ್ ಆಪರೇಷನ್ಸ್ ತರಬೇತಿಗಾಗಿ, ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
*ಡಿಜಿಆರ್ ಬೋಧಕ ಹುದ್ದೆಗಾಗಿ ಅಭ್ಯರ್ಥಿಯು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA)ಅನುಮೋದಿತ ಅಪಾಯಕಾರಿ ಸರಕುಗಳ ಬೋಧಕನಾಗಿರಬೇಕು. ಕನಿಷ್ಟ 5 ವರ್ಷಗಳ ತರಬೇತಿ ಅನುಭವವನ್ನು ಹೊಂದಿರಬೇಕು.
*ಪ್ರಯಾಣಿಕ ಸೇವಾ ವ್ಯವಸ್ಥೆ (PSS) ತರಬೇತುದಾರ ಹುದ್ದೆಗೆ, ಅಭ್ಯರ್ಥಿಯು PSS ವ್ಯವಸ್ಥೆಗಳಲ್ಲಿ ಕನಿಷ್ಠ 4 ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಜೆಟ್ ಏರ್‌ವೇಸ್ ಮಾರಾಟವನ್ನು ಮುಂದಿನ ಹಂತಕ್ಕೆ ಮತ್ತು ಅದರಾಚೆಗೆ ಅಭಿವೃದ್ಧಿಪಡಿಸಲು ಉನ್ನತ-ಕಾರ್ಯನಿರ್ವಹಣೆಯ ಮಾರಾಟ ವೃತ್ತಿಪರರನ್ನು ಸಹ ಏರ್‌ಲೈನ್ ಹುಡುಕುತ್ತಿದೆ.

ಒಂದು ವೇಳೆ ನಿಮಗೆ ಈ ಅರ್ಹತೆಗಳು ಇದ್ದಲ್ಲಿ ಕೂಡಲೇ ನಿಮ್ಮ ಸಿವಿಯನ್ನು ಇಲ್ಲಿಗೆ ಕಳುಹಿಸಿ: careers@jetairways.com

Leave A Reply

Your email address will not be published.