ಬಜೆಟ್ ಫ್ರೆಂಡ್ಲಿ ಟ್ರಿಪ್ ಮಾಡಲು ಬಯಸುವಿರೇ ? ಕೇವಲ 5000 ರೂ.ಇದ್ದರೆ ಸಾಕು, ಈ ಸುಂದರ ತಾಣಗಳ ಪ್ರವಾಸ ಮಾಡಬಹುದು..!
ಎಲ್ಲರೂ ಪ್ರವಾಸ ಹೋಗಲು ಬಹಳ ಇಷ್ಟ ಪಡುತ್ತಾರೆ. ಅದರಲ್ಲೂ ಬಜೆಟ್ ಫ್ರೆಂಡ್ಲಿ ಪ್ರವಾಸ ಕೈಗೊಳ್ಳಲು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರಯಾಣ ಮಾಡುವುದರಿಂದ ಮೈ ಮತ್ತು ಮನಸ್ಸು ಪ್ರಶಾಂತಗೊಂಡು ಒತ್ತಡದ ಬದುಕಿಗೆ ಸ್ವಲ್ಪ ಬ್ರೇಕ್ ದೊರೆತಂತಾಗುತ್ತದೆ. ಅಂಥಹ ಪ್ರವಾಸ ಕೈಗೊಳ್ಳಲು ಇಲ್ಲಿವೆ ಕೆಲವೊಂದು ಟ್ರಾವೆಲ್ ಟಿಪ್ಸ್. ನಮ್ಮ ಕರ್ನಾಟಕದ ಸುತ್ತಮುತ್ತಲಿನಲ್ಲಿಯೇ ತುಂಬಾ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ನಿಮಗಿಷ್ಟವಾದ ತಾಣವನ್ನು ಆಯ್ಕೆ ಮಾಡಿಕೊಂಡು ಬಜೆಟ್ ಪ್ರವಾಸವನ್ನು ಕೈಗೊಳ್ಳಬಹುದು. ನಾವಿಲ್ಲಿ ನಿಮಗೆ ಈಗ ಕೇವಲ 5000 ರೂ.ನಲ್ಲಿ ಬಜೆಟ್ ಫ್ರೆಂಡ್ಲಿ ಪ್ರವಾಸ ಕೈಗೊಳ್ಳುವ ಪ್ರವಾಸಿ ತಾಣ ಯಾವುದೆಂದು ತಿಳಿಯೋಣ ಬನ್ನಿ.
ಕರ್ನಾಟಕದ ದಾಂಡೇಲಿಯು ಸಾಕಷ್ಟು ಸಾಹಸ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಕಾಳಿ ನದಿಯ ದಡದಲ್ಲಿರುವ ದಾಂಡೇಲಿಯು ಹಚ್ಚ ಹಸಿರಿನ ಕಾಡುಗಳಿಂದ ಆವೃತ್ತವಾಗಿರುವ ಸೊಗಸಾದ ತಾಣವಾಗಿದೆ. ಇಲ್ಲಿ ಕಾವ್ಹಾ ಗುಹೆಗಳು, ಉಳವಿ ದೇವಾಲಯ, ಸಾಥೋಡಿ ಜಲಪಾತ ಸೇರಿದಂತೆ ಇನ್ನು ಅನೇಕ ಪ್ರವಾಸಿ ಆಕರ್ಷಣೆಗಳಿಗೆ ನೆಲೆಯಾಗಿದೆ.
ಸಾಹಸಿಗಳು ಮೌಂಟೇನ್ ಬೈಕಿಂಗ್, ಸೈಕ್ಲಿಂಗ್, ಕಯಾಕಿಂಗ್ ಮತ್ತು ಕ್ಯಾನೋಯಿಂಗ್‌ನಂತಹ ಹಲವು ಆಯ್ಕೆಗಳು ಕೂಡ ಇಲ್ಲಿ ಕೈಗೊಳ್ಳಬಹುದು. ಒಟ್ಟಾರೆ ದಾಂಡೇಲಿಯು ಬಜೆಟ್ ಟ್ರಿಪ್ ಮಾಡಲು ಸೂಕ್ತವಾಗಿದೆ.
ಹೊನ್ನೇಮರಡು ನಿಮ್ಮ ಬಜೆಟ್ ಪ್ರವಾಸಕ್ಕೆ ಸೂಕ್ತವಾದ
ಪ್ರವಾಸಿ ತಾಣವಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ
ಸಾಗರದಿಂದ ಕೇವಲ 25 ಕಿ.ಮೀ ದೂರದಲ್ಲಿ ಈ
ಹೊನ್ನೇಮರಡು ಇದೆ. ಪ್ರಕೃತಿಯ ಸುಂದರತೆ ಮೈತುಂಬಿರುವಂತಹ ಸ್ಥಳ. ಇಲ್ಲಿನ ಪ್ರಮುಖ ಆಕರ್ಷಣೆಯೇ ಹಿನ್ನೀರಿನ ತಾಣ. ಸಂಗಾತಿಯೊಂದಿಗೆ ಏಕಾಂತವಾಗಿ ಕಾಲಕಳೆಯಲು ಇದೊಂದು ಸೂಕ್ತವಾದ ಸ್ಥಳವೆಂದರೆ ತಪ್ಪಾಗಲಾರದು. ಅಲ್ಲದೆ, ತೆಪ್ಪದಲ್ಲಿ ಪ್ರಶಾಂತವಾದ ನೀರಿನಲ್ಲಿ ಸಂಗಾತಿಯೊಂದಿಗೆ ಕಾಲ ಕಳೆಯಬಹುದು. ಸಾಹಸ ಚಟುವಟಿಕೆಯ ಆಸಕ್ತರಾಗಿದ್ದರೆ ಈ ತಾಣವು ಸೂಪರ್ ಎಂದೇ ಹೇಳಬಹುದು. ಇಲ್ಲಿನ ವಿವಿಧ ಬಗೆಯ ಪಕ್ಷಿ ಮತ್ತು ಚಿಟ್ಟೆಗಳ ನಯನ ಮನೋಹರವಾದ ದೃಶ್ಯಗಳನ್ನು ಕಣ್ಣಾರೆ ಕಂಡು ಆನಂದಿಸಬಹುದು.
ಕರ್ನಾಟಕದ ಕೂರ್ಗ್ ಬಜೆಟ್ ಸ್ನೇಹಿ ಪ್ರವಾಸ ಕೈಗೊಳ್ಳಲು ಬೆಸ್ಟ್ ಎಂದೇ ಹೇಳಬಹುದು. ಕೂರ್ಗ್ ಕರ್ನಾಟಕದಲ್ಲಿನ ಅತ್ಯದ್ಭುತವಾದ ಸ್ಥಳದಲ್ಲಿ ಒಂದು. ಈ ತಾಣದಲ್ಲಿ ಶ್ರೀಮಂತ ಪ್ರಾಕೃತಿಕ ಸಂಪತ್ತು ಮತ್ತು ಆಹ್ಲಾದಕರವಾದ ಪ್ರವಾಸಿ ತಾಣಗಳಿವೆ. ಜಲಪಾತಗಳು, ಮಂಜಿನ ಭೂದೃಶ್ಯಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಸೂರ್ಯಾಸ್ತ, ಸೂರ್ಯೋದಯಗಳು, ರಾಜಾ ಸೀಟ್, ಮಡಿಕೇರಿ ಕೋಟೆ, ತಲಕಾವೇರಿ, ಅಬ್ಬೆ ಜಲಪಾತ ಸೇರಿದಂತೆ ಇನ್ನು ಅನೇಕ ಆಕರ್ಷಣೆಗಳನ್ನು ನೀವು ಇಲ್ಲಿ ವೀಕ್ಷಿಸಬಹುದು.
ತಮಿಳುನಾಡಿನ ಪುದುಚೇರಿಯು ನಿಮ್ಮ ಬಜೆಟ್ ಸ್ನೇಹಿ ಪ್ರವಾಸಕ್ಕೆ ಸೂಕ್ತವಾದ ತಾಣವಾಗಿದೆ. ನೀವು ಅಂತ್ಯವಿಲ್ಲದೇ ಇಲ್ಲಿ ಎಂಜಾಯ್ ಮಾಡಬಹುದು.
ಫ್ರೆಂಚ್ ಮತ್ತು ಭಾರತೀಯ ಪ್ರಭಾವದ ವಾಸ್ತುಶೈಲಿಯ ಪರಿಪೂರ್ಣವಾದ ಸಮ್ಮಿಶ್ರಣವನ್ನು ಕಣ್ಣುಂಬಿಕೊಳ್ಳಬಹುದು. ಇಲ್ಲಿನ ಸುಂದರವಾದ ಕಡಲತೀರದಲ್ಲಿ ನೀವು ಸಂಗಾತಿಯೊಂದಿಗೆ ಅಡ್ಡಾಡಬಹುದು. ಪುದುಚೇರಿಯ ಮನೋಹರವಾದ ಬೀಚ್, ಫ್ರೆಂಚ್ ವಸಾಹತು, ಶಾಂತಿಯುತ ಆಶ್ರಮಗಳು, ಕೆಫೆಗಳು, ಅಗ್ಗದ ಮದ್ಯಪಾನಗಳು ನಿಮ್ಮನ್ನು ಸೆಳೆಯುತ್ತದೆ. ಒಟ್ಟಾರೆ ಬಜೆಟ್ ಸ್ನೇಹಿ ಪ್ರವಾಸಕ್ಕೆ ಪುದುಚೇರಿ ಬೆಸ್ಟ್.
ಮಂಡ್ಯದ ಭೀಮೇಶ್ವರಿ ಅತ್ಯುತ್ತಮ ಬಜೆಟ್ ಟ್ರಿಪ್ ಅಗಿದೆ. ಪ್ರಕೃತಿಯನ್ನು ಆರಾಧಿಸುವವರು ಈ ಭೀಮೇಶ್ವರಿಗೆ ಭೇಟಿ ನೀಡಬಹುದು. ಬೆಂಗಳೂರಿನಿಂದ ಭೀಮೇಶ್ವರಿಗೆ ಕೇವಲ 105 ಕಿ.ಮೀ ದೂರದಲ್ಲಿದ್ದು, ಸಾಹಸ ಚಟುವಟಿಕೆಗಳನ್ನು ಆನಂದಿಸಲು ಭೀಮೇಶ್ವರಿ ಸೂಕ್ತವಾದ ವಿಹಾರ ತಾಣವಾಗಿದೆ. ಇಲ್ಲಿ ಪ್ರಕೃತಿ ಪ್ರೇಮಿಗಳಿಗೆ ಮತ್ತು ಸಾಹಸಿಗಳಿಗೆ ಸಾಕಷ್ಟು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನೀವು ಟ್ರೆಕ್ಕಿಂಗ್, ಮೀನುಗಾರಿಕೆಗಳನ್ನು ಇಲ್ಲಿ ಕೈಗೊಳ್ಳಬಹುದು.
ಕರ್ನಾಟಕದ ‘ಸಾಂಸ್ಕೃತಿಕ ನಗರಿ’ ಎಂದೇ ಖ್ಯಾತವಾಗಿರುವ ಮೈಸೂರು ಬಜೆಟ್ ಫ್ರೆಂಡ್ಲಿ ಟ್ರಿಪ್ ಎಂದೇ ಹೇಳಬಹುದು. ಏಕೆಂದರೆ ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ನಗರಗಳಲ್ಲಿ ಮೈಸೂರು ಕೂಡ
ಮೈಸೂರಿನಲ್ಲಿ ಹಲವಾರು ಆಧ್ಯಾತ್ಮಿಕ ತಾಣಗಳಿಗೆ ನೆಲೆಯಾಗಿದೆ. ಜನಪ್ರಿಯ ಮೈಸೂರು ಅರಮನೆ, ಮೃಗಾಲಯ, ಬೃಂದಾವನ ಉದ್ಯಾನವನ, ಝೂ ಸೇರಿದಂತೆ ಇನ್ನು ಅನೇಕ ಆಕರ್ಷಣೆಗಳನ್ನು ನೀವು ಇಲ್ಲಿ ವೀಕ್ಷಿಸಬಹುದು.
ಯೆರ್ಕಾಡ್ ಸೂಕ್ತವಾದ ಪ್ರವಾಸಿ ಸ್ಥಳವಾಗಿದೆ. ಇದು ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿರುವ ಅತ್ಯಂತ ನಿರ್ಮಲವಾದ ಗಿರಿಧಾಮ. ಈ ಗಿರಿಧಾಮವು ಕಾಫಿ ತೋಟಗಳಿಂದ ತುಂಬಿದೆ. ಈ ಆಹ್ಲಾದಕರವಾದ ಗಿರಿಧಾಮವು ಸಮುದ್ರಮಟ್ಟದಿಂದ ಸುಮಾರು 1515 ಮೀಟರ್ ಎತ್ತರದಲ್ಲಿದ್ದು, ಬೇಸಿಗೆಯಲ್ಲಿ ಅತ್ಯುತ್ತಮವಾಗಿರುತ್ತದೆ. ಯೆರ್ಕಾಡ್‌ನಲ್ಲಿ ಸರ್ವರಾಯನ್ ದೇವಾಲಯವು ಆಕರ್ಷಣೀಯ ಕೇಂದ್ರ.