ಸೋಮಾರಿ ಗಂಡನನ್ನು ಸರಿದಾರಿಗೆ ತರಲು ಹೆಂಡತಿಯರೇ ಇಲ್ಲಿದೆ ನಿಮಗೆ ಅದ್ಭುತ ಟಿಪ್ಸ್!

ಮನೆ ಕೆಲಸ ಎಂದರೆ ಕೇವಲ ಹೆಂಗಸರೇ ಮಾಡುವುದಾ ಅಂತ ಆಗ್ತದೆ. ಅದರಲ್ಲೂ ಮದುವೆಯಾದ ಮೇಲಂತೂ ಗಂಡ ಯಾವುದೇ ಮನೆ ಕೆಲಸ ಮಾಡುವುದಿಲ್ಲ ಅಂತ ಗೊತ್ತಾದರಂತೂ ಅದರಷ್ಟು ಕಷ್ಟ ಯಾವುದೂ ಇಲ್ಲ.
ಪತಿ ಮೊಬೈಲ್ ನೋಡುತ್ತಾ ಸೋಫಾದ ಮೇಲೆ ಕುಳಿತರೆ, ಅವರತ್ರ ಮನೆಗೆಲಸಕ್ಕೆ ಏನಾದರೂ ಸಹಾಯ ಮಾಡಿ ಎಂದು ಕೇಳಿದರೆ ಸೋಮಾರಿಯಂತೆ ವರ್ತಿಸುವ ಗಂಡಸರಿರುತ್ತಾರೆ. ಅಂತಹ ವೇಳೆ ನೀವು ಕೆಲವು ಸಲಹೆಗಳನ್ನು ಪಾಲಿಸಿದರೆ ಪತಿ ನಿಮಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ.

 

ನಿಮ್ಮ ಸೋಮಾರಿ ಗಂಡನ ಜೊತೆ ಪ್ರತಿದಿನ ಮಾತಾಡಿ. ನಿಮ್ಮ ಹೃದಯದಲ್ಲಿರುವ ವಿಚಾರವನ್ನು ಅವರೊಂದಿಗೆ ಹಂಚಿಕೊಳ್ಳಿ. ನೀವು ಮನೆಯಲ್ಲಿ ಏನೆಲ್ಲಾ ಜವಾಬ್ದಾರಿಯುತ ಕೆಲಸಗಳನ್ನು ಮಾಡುತ್ತೀರಿ ಎಂಬುದನ್ನು ಅವರ ಬಳಿ ಚರ್ಚಿಸಿ. ಆಗ ಅವರು ಅದನ್ನು ಅರಿತು ನಿಮಗೆ ಸಹಾಯ ಮಾಡಬಹುದು.

ಪತಿಯ ಮೇಲೆ ಕೋಪಗೊಳ್ಳಬೇಡಿ. ಇದರಿಂದ ಸಂಬಂಧದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಪತಿಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ. ಅವರು ಒಂದೇ ಕಡೆ ಕುಳಿತು ಕಚೇರಿ ಕೆಲಸ ಮಾಡುವುದರಲ್ಲಿ ನಿರತರಾಗಿರುವಾಗ ಮನೆಗೆಲಸಕ್ಕೆ ಕರೆಯಬೇಡಿ.

ಪತಿ ಸೋಮಾರಿಯಾಗಿದ್ದರೆ ಅವರಿಗೆ ಬೆಂಬಲ ನೀಡಬೇಡಿ. ಅವರ ಸೋಮಾರಿತನವನ್ನು ಸಹಿಸಿಕೊಳ್ಳಬೇಡಿ. ಬದಲಾಗಿ ಅವರ ಬಳಿ ಪದೇ ಪದೇ ಸಹಾಯ ಕೇಳಿ, ನಿರಾಕರಿಸಿದರೂ ಬಿಡಬೇಡಿ. ಕೊನೆಗೆ ಅವರು ನಿಮ್ಮ ಸಹಾಯಕ್ಕೆ ಬಂದೇ ಬರುತ್ತಾರೆ.

ಒಂದು ವೇಳೆ ಆತನಿಗೆ ಕೆಲಸಮಾಡಲು ಇಷ್ಟವಿಲ್ಲದೆ ಹೋದರೆ, ಅವನ ಮನಸ್ಸಿಗೆ ಖುಷಿಯಾಗುವಂತೆ ಆತನನ್ನು ಹೊಗಳಿ. ನಿಮ್ಮ ಮಾತುಗಳು ಆತನಿಗೆ ಪ್ರೇರಣಾ ರೀತಿ ಇದ್ದರೆ, ಖಂಡಿತವಾಗಿ ನೀವು ಹೇಳುವುದಕ್ಕೆ ಮುಂಚೆಯೇ ನಿಮಗಾಗಿ ಕೆಲಸ ಮಾಡಲು ಆತ ಸಿದ್ಧನಿರುತ್ತಾನೆ. ಅವರು ಯಾವುದೇ ಕೆಲಸ ಮಾಡಿದರೂ ಅವರನ್ನು ಹೊಗಳುತ್ತಲೇ ಇರಿ. ಇದರಿಂದ ಅವರು ತುಂಬಾ ಸಂತೋಷಗೊಳ್ಳುತ್ತಾರೆ. ಮತ್ತೆ ನಿಮಗೆ ಮನೆಗೆಲಸದಲ್ಲಿ ಸಹಾಯ ಮಾಡಲು ಆಸಕ್ತಿ ತೋರಿಸುತ್ತಾರೆ.

ಕೇವಲ ನಿಮ್ಮ ಗಂಡನ ಬಳಿ ಮಾತ್ರವಲ್ಲದೆ, ನಿಮ್ಮ ಮಕ್ಕಳ ಬಳಿ, ನಿಮ್ಮ ಅಕ್ಕ ಪಕ್ಕದವರ ಬಳಿ, ನಿಮ್ಮ ಬಂಧು ಬಾಂಧವರ ಜೊತೆಗೆ ನಿಮ್ಮ ಗಂಡನನ್ನ ಹೊಗಳಿ ಮಾತನಾಡಿ. ಇದರಿಂದ ನಿಮ್ಮ ಮೇಲೆ ನಿಮ್ಮ ಗಂಡನಿಗೆ ಹೆಚ್ಚು ಪ್ರೀತಿ ಬಂದು ನಿಮಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳುತ್ತಾನೆ.

ಪತಿಯ ಸೋಮಾರಿತನ ಕ್ರಮೇಣ ಕಡಿಮೆಯಾಗುತ್ತದೆ. ನಿಮ್ಮ ಪತಿಯಿಂದ ಎಂದಿಗೂ ಹೆಚ್ಚನ್ನೂ ನಿರೀಕ್ಷಿಸಬೇಡಿ.
ಪತಿ ಸೋಮಾರಿಯಾಗಿದ್ದರೆ ಅವರಿಗೆ ದೈಹಿಕ ಚಟುವಟಿಕೆ ಮಾಡಲು ಹೇಳಿ. ಅವರು ವ್ಯಾಯಾಮ ಯೋಗ ಮಾಡುವಾಗ ಅವರಿಗೆ ಬೇಸರವಾಗದಂತೆ ಜೊತೆಗೆ ಇರಿ.

ಪತಿ ಸೋಮಾರಿಯಾದರೆ ಅಥವಾ ಕೆಲಸದಲ್ಲಿ ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಕುಟುಂಬದವರ ಮುಂದೆ ಅಥವಾ ಮಕ್ಕಳು, ಸ್ನೇಹಿತರ ಮುಂದೆ ಅವಮಾನ ಮಾಡಬೇಡಿ.

ಮನೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ನಿಮ್ಮ ಗಂಡನಿಗೆ ಪರಿಣಿತಿ ಇಲ್ಲದೆ ಇರಬಹುದು. ಹಾಗಾಗಿ ನೀವು ಹೇಳಿದ ಸಮಯಕ್ಕೆ ಸರಿಯಾಗಿ ನಿಮ್ಮ ಗಂಡ ಕೆಲಸ ಮಾಡಿ ಮುಗಿಸಲು ಸಾಧ್ಯವಾಗದೇ ಇರಬಹುದು. ಇದರಿಂದ ನೀವು ಬೇಸರಪಟ್ಟುಕೊಂಡು ಆತನ ಮೇಲೆ ರೇಗುವುದು ಸರಿಯಲ್ಲ. ನಿಮಗೆ ಆಗಬೇಕಾದ ಕೆಲಸ ಬಹಳ ಬೇಗನೆ ಆಗಬೇಕು ಎಂದಿದ್ದರೆ, ನಿಮ್ಮ ಗಂಡನ ಜೊತೆ ನೀವು ಸಹ ಕೈಜೋಡಿಸಿ. ನಿಮ್ಮ ಗಂಡನಿಗೆ ನೀವು ಹೇಳಿದ ಕೆಲಸವನ್ನು ಮಾಡಿ ಮುಗಿಸಲು ಸಾಕಷ್ಟು ಸಮಯ ನೀಡುವ ಮನಸ್ಸು ನೀವು ಮಾಡಬೇಕು.

ಪತಿ ಮನೆಗೆಲಸದಲ್ಲಿ ಸಹಾಯ ಮಾಡಲು ಬಂದಾಗ ಸಣ್ಣ ಪುಟ್ಟ ಕೆಲಸ ಹೇಳಿ, ತರಕಾರಿ ಕತ್ತರಿಸುವುದು, ವಸ್ತುಗಳನ್ನು ಜೋಡಿಸುವಂತಹ ಕೆಲಸಗಳನ್ನು ನೀಡಿ.

ನಿಮ್ಮ ಗಂಡನ ಕೈಯಿಂದ ಹೇಗಾದರೂ ಮಾಡಿ ಯಾವುದಾದರೂ ಒಂದು ಕೆಲಸವನ್ನು ನೀವು ಮಾಡಿಸಲೇಬೇಕು ಎಂದು ತೀರ್ಮಾನ ಮಾಡಿದ ನಂತರ, ಎಂದಿಗೂ ಅದರಿಂದ ಹಿಂದೆ ಸರಿಯಬೇಡಿ. ಹಾಗೆಂದು ನಿಮ್ಮ ಗಂಡನ ಬಳಿ ಜೋರಾಗಿ ರೇಗಾಡಿ ಕಿರುಚಾಡಿ ರಂಪ ಮಾಡಬೇಡಿ. ಸಮಾಧಾನವಾಗಿ ಆತನಿಗೆ ಇಷ್ಟವಾಗುವ ಹಾಗೆ ಮಾತನಾಡುತ್ತಾ ನಿಮ್ಮ ಗಂಡನಿಗೆ ಆ ಒಂದು ಕೆಲಸವನ್ನು ಮಾಡದೆ ಬೇರೆ ದಾರಿಯೇ ಇಲ್ಲ ಎಂಬಂತಹ ಭಾವನೆಯನ್ನು ಹುಟ್ಟುಹಾಕಿ. ಇದರಿಂದ ನಿಮ್ಮ ಮಾತಿಗೆ ಕಟ್ಟುಬಿದ್ದು, ನಿಮ್ಮ ಮೇಲಿನ ಪ್ರೀತಿಯಿಂದ ನಿಮ್ಮ ಗಂಡ ನೀವು ಹೇಳಿದ ಕೆಲಸವನ್ನು ನಿಮಗಾಗಿ ಮಾಡಿಕೊಡುತ್ತಾನೆ.

ಕೆಲಸಕ್ಕೆ ರಜಾ ಸಿಕ್ಕ ಸಂದರ್ಭದಲ್ಲಿ ನಿಮ್ಮ ಕುಟುಂಬ ಸಹಿತ ನಿಮ್ಮ ಗಂಡನನ್ನು ಹೊರಗಡೆ ಎಲ್ಲಿಯಾದರೂ ಟ್ರಿಪ್ ಗೆ ಕರೆದುಕೊಂಡು ಹೋಗಿ. ವಾತಾವರಣದ ಬದಲಾವಣೆಯಿಂದ ಮನಸ್ಸು ಪ್ರಶಾಂತಗೊಳ್ಳುತ್ತದೆ. ಇದರಿಂದ ಹೊಸ ಹೊಸ ಕೆಲಸಗಳನ್ನು ಮಾಡಲು ನಿಮ್ಮ ಗಂಡನಿಗೆ ಮನಸ್ಸು ಬದಲಾಗುತ್ತದೆ.

Leave A Reply

Your email address will not be published.