‘ ದಲಿತರ ಬಾಹುಗಳಲ್ಲಿ ದನದ ಮಾಂಸ ತಿಂದ ರಕ್ತ ಹರಿಯುತ್ತಿರುವುದು, ಇಡ್ಲಿ ಸಾಂಬಾರ್ ತಿಂದ ರಕ್ತ ಅಲ್ಲ ‘ ಹೇಳಿಕೆ | SDPI ನಾಯಕ ಅಫ್ಹಲ್ ಕೊಡ್ಲಿಪೇಟೆ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ದೂರು

ಮಂಗಳೂರು: ಕಣ್ಣೂರು ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಹಲ್ ಕೊಡ್ಲಿಪೇಟೆ ದಲಿತರ ಕುರಿತು ಮಾಡಿದ ಪ್ರಚೋದನಕಾರಿ ಭಾಷಣ ಇದೀಗ ವೈರಲ್ ಆಗಿದೆ.
ದಲಿತರು ಕೂಡಾ ದನದ ಮಾಂಸ ತಿಂತಾರೆ ಎಂಬ ಹೇಳಿಕೆ ಈಗ ವಿವಾದ ಪಡೆದುಕೊಂಡಿದೆ.

 

ಈ ಮಧ್ಯೆ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಬೆಳ್ತಂಗಡಿ ಆರಕ್ಷಕ ಠಾಣಾ ಉಪನಿರೀಕ್ಷರಿಗೆ ದ.ಕ ಬಿಜೆಪಿ ಪ್ರಕಾಶನ ಪ್ರಕೋಷ್ಟ ಜಿಲ್ಲಾ ಸಂಚಾಲಕ ಸುಜಿತ್ ರಾಜ್ ಮನವಿಯನ್ನು ನೀಡಿದ್ದಾರೆ.

ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಹಲ್ ಕೊಡ್ಲಿಪೇಟೆ ಕಣ್ಣೂರು ಮೈದಾನದಲ್ಲಿ ಭಾಷಣ ಮಾಡುವ ಭರದಲ್ಲಿ “ದಲಿತರ ಬಾಹುಗಳಲ್ಲಿ, ಮುಸಲ್ಮಾನರ ಬಾಹುಗಳಲ್ಲಿ ದನದ ಮಾಂಸ ತಿಂದ ರಕ್ತ ಹರಿಯುತ್ತಿದೆ. ಇಡ್ಲಿ ಸಾಂಬಾರ್ ತಿಂದ ರಕ್ತ ಅಲ್ಲ ನಮ್ಮಲ್ಲಿ ಹರಿಯುತ್ತಿರುವುದು. ನಮ್ಮ ಬಾಹುಗಳಲ್ಲಿ ಪೌಷ್ಠಿಕವಾದ ದನದ ಮಾಂಸ ತಿಂದ ರಕ್ತ….. ‘ ಎಂದು ಹೇಳಿಕೆ ನೀಡಿದ್ದು,ಅದೀಗ ವಿವಾದ ಸೃಷ್ಠಿಯಾಗಿದೆ.

ಇದು ದಲಿತ ಸಮಾಜಕ್ಕೆ ಮಾಡಿದ ಅವಮಾನ. ಇಡೀ ದಲಿತ ಸಮಾಜವನ್ನು ಅವಮಾನ ಮಾಡಿದ ಅಫ್ಹಲ್ ಕೊಡ್ಲಿಪೇಟೆಯ ಮೇಲೆ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

Leave A Reply

Your email address will not be published.