ಹಾಡಹಗಲೇ ಪಂಜಾಬ್ ನ ಕಾಂಗ್ರೆಸ್ ನಾಯಕ, ಖ್ಯಾತ ಗಾಯಕ ಸಿಧು ಗುಂಡೇಟಿಗೆ ಬಲಿ | ಆಮ್ ಆದ್ಮಿ ಸರ್ಕಾರ ಭದ್ರತೆ ಹಿಂಪಡೆದ 24 ಗಂಟೆಯಲ್ಲೇ ಹರಿಯಿತು ರಕ್ತದೋಕುಳಿ

ಹಾಡಹಗಲೇ ಪಂಜಾಬ್ ಕಾಂಗ್ರೆಸ್ ನಾಯಕ, ಖ್ಯಾತ ಗಾಯಕ ಸಿಧು ಮೂಸೆ ವಾಲಾ ಹತ್ಯೆ ನಡೆಸಲಾಗಿದೆ. ಹತ್ಯೆಗೆ ಇಡೀ ಪಂಜಾಬ್ ಬೆಚ್ಚಿಬಿದ್ದಿದೆ. ದುಷ್ಕರ್ಮಿಗಳು ಸಿಧು ತೆರಳುತ್ತಿದ್ದ SUV ಯನ್ನು ಬೆನ್ನಟ್ಟಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ನಿನ್ನೆಯಷ್ಟೇ ಪಂಜಾಬ್ ಸರ್ಕಾರ ಸಿಧು ನ ಭದ್ರತೆಯನ್ನು ವಾಪಸ್ ಪಡೆದಿತ್ತು. ನಾವು ಜನಸಾಮಾನ್ಯರ ಸರ್ಕಾರ ಎಂದು 400ಕ್ಕೂ ಹೆಚ್ಚು ಮಂದಿಯ ಭದ್ರತೆ ವಾಪಸ್ ಪಡೆದಿತ್ತು. ಭದ್ರತೆ ವಾಪಸ್ ಪಡೆದ ಮರುದಿನವೇ ಸಿಧು ಮೂಸೆವಾಲ ಹತ್ಯೆಯಾಗಿದ್ದಾರೆ. ಈ ಕೊಲೆಗೆ ಸಿಎಂ ಭಗವಂತ್ ಮಾನ್ ನೇರ ಹೊಣೆ, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

 

ಆಮ್ ಆದ್ಮಿ ಸರ್ಕಾರ 400ಕ್ಕೂ ಹೆಚ್ಚು ರಾಜಕಾರಣಿಗಳು, ಸೆಲೆಬ್ರೆಟಿಗಳು, ಬೆದರಿಕೆ ಇದ್ದ ವ್ಯಕ್ತಿಗಳ ಭದ್ರತೆಯನ್ನು ವಾಪಸ್ ಪಡೆದಿತ್ತು. ಬಳಿಕ ಆಮ್ ಆದ್ಮಿ ಪಾರ್ಟಿ ವಿಐಪಿ ಸಂಸ್ಕೃತಿಯನ್ನು ಬೆಳೆಸಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಆಮ್ ಆದ್ಮಿ ದುಸ್ಸಾಹಸಕ್ಕೆ ಸಿಧು ಮೂಸೆ ವಾಲಾ ಬಲಿಯಾಗಿದ್ದಾರೆ. ಇದು ಆಮ್ ಆದ್ಮಿ ಸರ್ಕಾರ, ಸಿಎಂ ಭಗವಂತ್ ಮಾನ್ ಹಾಗೂ ಅರವಿಂದ್ ಕೇಜ್ರಿವಾಲ್ ಹೊಣೆ ಎಂದು ಬಿಜೆಪಿ ಆರೋಪಿಸಿದೆ.

ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಛೆ ಸಂಪೂರ್ಣವಾಗಿ ಹದಗೆಟ್ಟಿದೆ. ನಿನ್ನೆ ಆಪ್ ಸರ್ಕಾರ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಭದ್ರತೆ ವಾಪಸ್ ಪಡೆದಿತ್ತು. ಇಂದು ಅಪರಿಚಿತರಿಂದ ಸಿಧು ಮೂಸೆವಾಲ ಹತ್ಯೆಯಾಗಿದ್ದಾರೆ ಎಂದು ಪಂಜಾಬ್ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ.

ಕಳೆದ ಹಲವು ದಿನಗಳಿಂದ ಪಂಜಾಬ್ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡುತ್ತಲೇ ಬಂದಿದ್ದೇವೆ. ಆದರೆ ಆಮ್ ಆದ್ಮಿ ಪಾರ್ಟಿ ಜನಸಾಮಾನ್ಯರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಈ ಸಾವಿಗೆ ಭಗವಂತಾ ಮಾನ್ ಕಾರಣ, ಹೀಗಾಗಿ ಭಗವಂತ್ ಸಿಂಗ್ ಮಾನ್ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮಂಜಿಂದರ್ ಸಿಂಗ್ ಸಿರ್ಸಾ ಒತ್ತಾಯಿಸಿದ್ದಾರೆ.

Leave A Reply

Your email address will not be published.