ಮಂಗಳೂರಿನಲ್ಲಿ ಹಿಜಬ್ ವಿವಾದವನ್ನು ಜೀವಂತವಾಗಿಸುವ ಪ್ರಯತ್ನದಲ್ಲಿ ಮುಸ್ಲಿಂ ಹುಡುಗಿಯರು | ಪಿಕ್ ನಿಕ್ ಗೆಂದು ಬಂದವರಂತಿದ್ದ 12 ಮಂದಿಯನ್ನು ವಾಪಸ್ ಕಳಿಸಿದ ಪ್ರಿನ್ಸಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಇಂದು ಕೂಡ 12 ಮಂದಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಆಗಮಿಸಿದ್ದರು. ಆದರೆ ಹಿಜಬ್ ತೊಟ್ಟು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದ ಹಿನ್ನೆಲೆ 12 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.
ಹಿಜಾಬ್ ಧರಿಸಿ ಕ್ಲಾಸ್ ಅಟೆಂಡ್ ಮಾಡಲು ಬಿಡಲ್ಲ ಎನ್ನುವುದು ಗೊತ್ತಿದ್ದರೂ, ಆ ಹುಡುಗಿಯರು ಹಿಜಾಬ್ ಜತೆಗೆ ಬಂದಿದ್ದರು. ಕೈಯಲ್ಲಿ ತರ್ಬೇಕಲ್ಲ ಅಂತ ಒಂದಷ್ಟು ಸಾಮಗ್ರಿ ಬಿಟ್ಟರೆ, ಬೇರೇನೂ ತಂದಿರಲಿಲ್ಲ. ಒಟ್ಟಾರೆ ಪಿಕ್ ನಿಕ್ ಗೆ ಬಂದ ಹಾಗಿತ್ತು. ಮುಖ್ಯವಾಗಿ ಯಾರದೋ ಒತ್ತಾಸೆಗೆ, ಕಿರಿಕ್ ಮಾಡಿಯೇ ಸಿದ್ಧ ಎಂದು ತೋರ್ಪಡಿಸಲು ಬಂದ ಹಾಗಿತ್ತು.
12 ಮಂದಿ ಹಿಜಬ್ ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಹಿಜಬ್ ಧರಿಸಿ ಬಂದಿದ್ದರೆ, ಕಾಲೇಜಿನಲ್ಲಿ ಅವಕಾಶ ಸಿಗದ ಕಾರಣ ಅವರು ಗ್ರಂಥಾಲಯಕ್ಕೆ ತೆರಳಿದ್ದಾರೆ. ಆ ವಿದ್ಯಾರ್ಥಿನಿಯರನ್ನು ಲೈಬ್ರರಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೇ ಪ್ರಾಂಶುಪಾಲೆ ಅನುಸೂಯ ರೈ ವಾಪಸ್ ಕಳುಹಿಸಿದ್ದಾರೆ.
ಕಾಲೇಜಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ನಂತರ ಹೊರಗೆ ತೆರಳಿ ಮನೆಗೆ ಹಿಂದಿರುಗಿದ್ದಾರೆ. ಅವರು ಡಿಸಿ ಕಚೇರಿಗೆ ಭೇಟಿ ನೀಡಿ ಹಿಜಬ್ ಧರಿಸಿ ಕಾಲೇಜಿಗೆ ತೆರಳಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.