” ನಿಮ್ಮಿಂದಲೇ ನಮ್ಮ ಮಳಲಿ ದೇವಸ್ಥಾನಕ್ಕೆ ಮರಳು ಹೊರಿಸ್ತೇವೆ” | SDPI ರಾಜ್ಯಾಧ್ಯಕ್ಷ ನ ನಿನ್ನೆಯ ಹೇಳಿಕೆಗೆ ಬಿಜೆಪಿ ನಾಯಕ ಯಶ್ ಪಾಲ್ ಸುವರ್ಣ ಎಚ್ಚರಿಕೆ
ಮಂಗಳೂರಿನ ಮಳಲಿ ಜುಮ್ಮಾ ಮಸೀದಿಯಲ್ಲಿ ಹಿಂದೂ ದೇವರ ಕುರುಹು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಯೊಂದನ್ನು ನೀಡಿದ್ದು ಅದಕ್ಕೆ ಪ್ರತಿಯಾಗಿ ಈಗ ಸ್ಥಳೀಯ ಬಿಜೆಪಿ ಮುಖಂಡ ಪ್ರತಿ ಹೇಳಿಕೆ ನೀಡಿದ್ದಾರೆ. ಮಳಲಿ ಜಗಳ ಮರಳು ಹೊರಿಸುವಲ್ಲಿಗೆ ಬಂದು ತಲುಪಿದೆ.
“ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು” ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.
” ಹಿಂದುಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರ ವಹಿಸಿ, ಹಿಂದುಗಳು ಮನಸ್ಸು ಮಾಡಿದರೆ ನೀವೆಲ್ಲಾ ನಾಮ ಹಾಕಿಕೊಂಡು ಕೇಸರಿ ಶಾಲು ಧರಿಸಿ ಓಡಾಡಬೇಕಾಗುತ್ತದೆ” ಎಂದು ಕಟು ಮಾತುಗಳಲ್ಲಿ ಹೇಳಿದ್ದಾರೆ ಯಶ್ಪಲ್ ಸುವರ್ಣ.
“ಮಳಲಿ ಮಸೀದಿಯ ಒಂದು ಹಿಡಿ ಮಣ್ಣು ಕೊಡುವುದಿಲ್ಲ ಎಂದು ನೀವು ಹೇಳಿದ್ದೀರಿ, ನಿಮ್ಮಿಂದಲೇ ನಮ್ಮ ಮಳಲಿ ದೇವಸ್ಥಾನಕ್ಕೆ ಮರಳು ಹೊರಿಸುತ್ತೇವೆ” ಎಂದು ಹೇಳಿರುವ ಯಶಪಾಲ್ ಸುವರ್ಣ, ಈ ರೀತಿಯ ಹೇಳಿಕೆ ಕೊಡುವುದನ್ನು ನಿಲ್ಲಿಸದಿದ್ದರೆ, ನಿಮ್ಮ ಸಮುದಾಯದಲ್ಲಿರುವ ಅಮಾಯಕ ಜನರು ಕೂಡ ಇದಕ್ಕೆ ತಕ್ಕ ಬೆಲೆ ತೆರಬೇಕಾಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.