ಭಾರತ್​ ಸಹಕಾರಿ ಬ್ಯಾಂಕ್​ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಪದವಿ ಆಗಿರುವ ಅಭ್ಯರ್ಥಿಗಳಿಗೆ ಅವಕಾಶ, ಅರ್ಜಿ ಸಲ್ಲಿಸಲು ಕೊನೆದಿನ-ಜೂನ್​ 15

ಭಾರತ್​ ಸಹಕಾರಿ ಬ್ಯಾಂಕ್​ ಬೆಂಗಳೂರಿನ ಜಯನಗರದನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆಯ ಹೆಸರು : ಭಾರತ್ ಸಹಕಾರಿ ಬ್ಯಾಂಕ್ (BCB ಬ್ಯಾಂಕ್)
ಹುದ್ದೆಗಳ ಸಂಖ್ಯೆ : 18
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ಅಟೆಂಡೆಂಟ್, ಅಕೌಂಟೆಂಟ್
ವೇತನ : ರೂ. 12,500 – 56,500/- ಪ್ರತಿ ತಿಂಗಳು

ಹುದ್ದೆ ಸಂಖ್ಯೆ, ವೇತನ, ವಿದ್ಯಾರ್ಹತೆ:

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : 1ಹುದ್ದೆ , 40,050 – 56,550 ರೂ ಮಾಸಿಕ, ವಿದ್ಯಾರ್ಹತೆ ಪದವಿ
ಕಂಪ್ಯೂಟರ್ ಮ್ಯಾನೇಜರ್ : 1ಹುದ್ದೆ , 28,100 – 50,100 ರೂ ಮಾಸಿಕ, ವಿದ್ಯಾರ್ಹತೆ ಎಂಸಿಎ, ಕಂಪ್ಯೂಟರ್​ ಸೈನ್ಸ್​ ಪದವಿ
ವ್ಯವಸ್ಥಾಪಕರು : 3ಹುದ್ದೆ , 28,100 – 50,100 ರೂ ಮಾಸಿಕ, ವಿದ್ಯಾರ್ಹತೆ ಪದವಿ
ಲೆಕ್ಕಪರಿಶೋಧಕ : 2ಹುದ್ದೆ , 24,000 – 45,300 ರೂ ಮಾಸಿಕ, ವಿದ್ಯಾರ್ಹತೆ ಬ್ಯುಸಿನೆಸ್​ ಮ್ಯಾನೇಜ್​​ಮೆಂಟ್​​ನಲ್ಲಿ ಪದವಿ
ಸಹಾಯಕ ಲೆಕ್ಕಾಧಿಕಾರಿ
: 2ಹುದ್ದೆ , 21,600 – 40,050 ರೂ ಮಾಸಿಕ, ವಿದ್ಯಾರ್ಹತೆ ವಾಣಿಜ್ಯ ನಿರ್ವಹಣೆಯಲ್ಲಿ ಪದವಿ
ದ್ವಿತೀಯ ದರ್ಜೆ ಸಹಾಯಕ : 2ಹುದ್ದೆ , 17,650 – 32,000 ರೂ ಮಾಸಿಕ, ವಿದ್ಯಾರ್ಹತೆ ಪಿಯುಸಿ
ಪರಿಚಾರಕ :6ಹುದ್ದೆ , 12,500 – 24,000 ರೂ ಮಾಸಿಕ, ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ

ವಯೋಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ:
ಹಿಂದುಳಿದ ವರ್ಗಗಳು (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳು: 3 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳು: 5 ವರ್ಷಗಳು

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ

ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಹೊಂದುಳಿದ ಅಭ್ಯರ್ಥಿಗಳಿಗೆ 1000 ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ

ಸೂಚನೆ :ಅರ್ಜಿ ಶುಲ್ಕವನ್ನು ದಿ ಭಾರತ್​ ಕೋ ಆಪರೇಟಿವ್​ ಬ್ಯಾಂಕ್​ ಲಿ. ಇವರ ಹೆಸರಿಗೆ ಡಿಡಿ/ ಪೇ ಆರ್ಡರ್ಸ್​/ ಪೋಸ್ಟಲ್​ ಆರ್ಡರ್ಸ್​ ಮೂಲಕ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಕೆ ವಿಧಾನ: ಆಫ್​ಲೈನ್​

ಅರ್ಜಿ ಸಲ್ಲಿಕೆ ವಿಳಾಸ:
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜೂನ್​ 15ರೊಳೆಗೆ ಈ ಕೆಳಕಂಡ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ನಂ. 30, 15 ನೇ ಕ್ರಾಸ್, 3 ನೇ ಬ್ಲಾಕ್, ಜಯನಗರ, ಬೆಂಗಳೂರು – 560011.

ಪ್ರಮುಖ ದಿನಾಂಕ :
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 25, 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 15, 2022

ಸೂಚನೆ:
*ಅರ್ಜಿಯನ್ನು ಸಹಿಯ ಜೊತೆ ಸ್ವಯಂ ದೃಢೀಕರಣದೊಂದಿಗೆ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸಬೇಕು
*3 ಪಾಸ್​ಪೋರ್ಟ್​ ಫೋಟೋ,ಶೈಕ್ಷಣಿಕ ಪ್ರಮಾಣ ಪತ್ರಗಳ ಅಂಕ ಪಟ್ಟಿಗಳು, ವಯಸ್ಸುನ ದೃಢೀರಣ ಕುರಿತು ಎಸ್​ಎಸ್​ಎಲ್​ಸಿ ಅಂಕಪಟ್ಟಿ, ಸೇವಾ ಅನುಭವ ಪ್ರಮಾಣ ಪತ್ರ, ಮೀಸಲಾತಿ ಸಂಬಂಧ ಜಾತಿ ಪ್ರಮಾಣ ಪತ್ರ.

ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: bcbbank.co

Leave A Reply

Your email address will not be published.