ಮೂರು ದಿನಗಳ
ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿಗೆ ಚಾಲನೆ.*
ಹೊಸಪೇಟೆ : ಇಲ್ಲಿನ ರೈತ ಭವನದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಅಂಧರ ಚದುರಂಗ ಸ್ಪರ್ಧೆ ಶುಕ್ರವಾರ ನಡೆಯಿತು.
ಸೇವಿಯರ್ ಅಂಗವಿಕಲರ ಸೇವಾ ಸಂಘದ ಸಂಸ್ಥಾಪಕ ಡಿ.ಎನ್.ಸಂತೋಷ ಕುಮಾರ ಆಯೋಜಿಸಿದ ಕಾರ್ಯಕ್ರಮಕ್ಕೆ ಜಿಂದಾಲ್ ಹಿರಿಯ ಉಪಾಧ್ಯಕ್ಷ ಮಂಜುನಾಥ ಪ್ರಭು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚದುರಂಗ ಸ್ಪರ್ಧಾತ್ಮಕ ಭಾವನೆಯಿಂದ ಆಟವಾಡವುದು ಮುಖ್ಯ ಇದು ಜೀವನಕ್ಕೂ ಸ್ಪೂರ್ತಿ ಯಾಗಬೇಕು ಸಾಧನೆಗೆ ಅಂಗವೈಕಲ್ಯ ಸೇರಿದಂತೆ ಯಾವುದು ಅಡ್ಡಿಯಲ್ಲ ಎನ್ನುವುದನ್ನು ಅಂದತ್ವದ ನಡುವೆ ತಾವುಗಳು ತೋರುತ್ತಿರುವ ಉತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದರು.
ಯುವ ಮುಖಂಡ ಸಿದ್ದಾರ್ಥಸಿಂಗ್ ಮಾತನಾಡಿ, ಸಾಮಾನ್ಯರನ್ನು ಒಂದುಗೂಡಿಸುವುದೇ ಒಂದು ಸಾಧನೆ, ಇಂತಹ ಸಂದರ್ಭದಲ್ಲಿ ವಿಶೇಷ ಚೇತನರಾದ ತಮ್ಮನ್ನು ಒಂದುಗೂಡಿಸಿ ಸ್ಪರ್ಧೆಯನ್ನು ಆಯೋಜಿಸುವುದು ಕಷ್ಟಸಾಧ್ಯ ಇಂತಹ ಸಾಧನೆ ಮಾಡುವವರಿಗೆ ಎಲ್ಲರೂ ಸ್ಪಂದಿಸಬೇಕಾಗಿರುವುದು ಅಗತ್ಯ ಹೀಗಾಗಿ ತಮಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಅಂತರಾಷ್ಟ್ರೀಯ ಚದುರಂಗ ಪಟು ಕಿಶನ್ ಮಾತನಾಡಿ, ಇಂದಿನ ದಿನಗಳಲ್ಲಿ ಕ್ರೀಡೆಗೆ ವಿಫುಲ ಅವಕಾಶಗಳಿವೆ. ಇವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಎಲ್ಲರೂ ಬೆಳಯಬಹುದು ಎಂದರು.
ರಾಜ್ಯ ಚದುರಂಗ ಸಂಘದ ಅಧ್ಯಕ್ಷ ಕೃಷ್ಣಾ ಉಡುಪಾ ಮಾತನಾಡಿ,ನಮ್ಮದೇ ಆದ ಸಮಸ್ಯೆಗಳ ನಡುವೆ ದೇಶಕ್ಕಾಗಿ ಆಡಬೇಕಾಗಿದೆ ವಿಶೇಷ ಚೇತನರಾದ ನಾವು ಏಕಾಗ್ರತೆಯಿಂದ ಸಾಧನೆಗೆ ಕಾರಣವಾಗಬಹುದು ಎಂದರು.
ಈ ಸಂಧರ್ಭದಲ್ಲಿ ಅಬ್ದುಲ್ ನಭಿ, ಧರ್ಮರಾಜ,ಸೇರಿದಂತೆ ಪಂದ್ಯಾವಳಿಯಲ್ಲಿ ರಾಜ್ಯದ 230ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.