Ayushman Card : ಇನ್ಮುಂದೆ ನವಜಾತ ಶಿಶುವಿಗೂ ಸಿಗಲಿದೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್’ ಐಡಿ

Share the Article

ನವಜಾತ ಶಿಶುವಿಗೆ ಸಂಬಂಧಿಸಿದಂತೆ ಮಾಹಿತಿಯ ಸಂಪೂರ್ಣ ವಿವರ ಆಯುಷ್ಮಾನ್ ಆರೋಗ್ಯ ಭಾರತ್ ಐಡಿಯಲ್ಲಿ ದಾಖಲಿಸಲಾಗುತ್ತಿರಲಿಲ್ಲ. ಹೀಗಾಗಿ ಕೆಲವು ಸಂದರ್ಭದಲ್ಲಿ ಮಗುವಿನ ಸಂಪೂರ್ಣ ಹಿಸ್ಟರಿ ದೊರೆಯದೇ ವೈದ್ಯರು ಚಿಕಿತ್ಸೆಗಾಗಿ ಗೊಂದಲಕ್ಕೆ ಒಳಗಾಗುವಂತೆ ಆಗಿತ್ತು. ಇನ್ಮುಂದೆ ಇದಕ್ಕೆ ತೆರೆ ಬೀಳಲಿದೆ. ನವಜಾತ ಶಿಶುವಿಗೂ ಇನ್ಮುಂದೆ ಆಯುಷ್ಮಾನ್ ಭಾರತ ಐಡಿ ದೊರೆಯಲಿದೆ.

ಹೌದು.. ಈಗ ನವಜಾತ ಶಿಶುವಿಗೂ ಆಯುಷ್ಮಾನ್ ಭಾರತ ಆರೋಗ್ಯ ಖಾತೆ ಐಡಿ ದೊರೆಯಲಿದೆ. ಇದಕ್ಕಾಗಿ 18 ವರ್ಷ ಕಾಯುವ ಅಗತ್ಯವೂ ತಪ್ಪಲಿದೆ. ಹೆಲ್ತ್ ಐಡಿ ಎಂದು ಕರೆಯಲಾಗುವ ಇದರಲ್ಲಿ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತ ಸಂಪೂರ್ಣ ಮಾಹಿತಿ ಇರಲಿದೆ.

ಮಗುವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ವೈದ್ಯರಿಗೆ ಈ ಆಯುಷ್ಮಾನ್ ಭಾರತ ಐಡಿಯಲ್ಲಿ ಇರಲಿದೆ. ಹೀಗಾಗಿ ಮಗುವಿನ ಆರೋಗ್ಯ ಸಮಸ್ಯೆಯನ್ನು ವೈದ್ಯರು ಈ ಐಡಿಯಲ್ಲಿ ಚೆಕ್ ಮಾಡಿ, ಒಂದೇ ಅಡಿಯಲ್ಲಿ ಮಗುವಿನ ಸಂಪೂರ್ಣ ಇತಿಹಾಸವೇ ದೊರೆತು, ಚಿಕಿತ್ಸೆಗೆ ಅನುಕೂಲವಾಗಲಿದೆ.

Leave A Reply

Your email address will not be published.