ಮಂಗಳೂರು : ದರ್ಗಾ ಕೆಡವಿದಾಗ ದೇವಸ್ಥಾನ ಪ್ರತ್ಯಕ್ಷ | ತಾಂಬೂಲ ಪ್ರಶ್ನೆಗೆ ಡೇಟ್ ಫಿಕ್ಸ್
ಮಂಗಳೂರು : ದರ್ಗಾ ಕೆಡವಿದಾಗ ದೇವಸ್ಥಾನ ಕಂಡಿರುವ ಘಟನೆಯೊಂದು ಕಳೆದ ತಿಂಗಳು ನಡೆದಿತ್ತು. ಮಂಗಳೂರು ಹೊರ ವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನ ಇರುವ ಬಗ್ಗೆ ಮಸೀದಿ ಕೆಡಹಿದಾಗ ಪತ್ತೆಯಾಗಿದೆ.
ಹಿಂದೂ ದೇವಾಲಯ ಗಂಭೀರವಾಗಿ ಪರಿಗಣಿಸಿರುವ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತಾಂಬೂಲ ಪಶ್ನೆ ಇಡಲು ತೀರ್ಮಾನಿಸಿದೆ. ಜಾಗದಲ್ಲಿ ದೈವಿಕ ಶಕ್ತಿ ಇದೆಯೊ ಇಲ್ಲವೂ ಎಂದು ತಿಳಿಯಲು ತಾಂಬೂಲ ಪ್ರಶ್ನೆ ಇಡಲಾಗುವುದು ಎಂದಿರುವ ಮುಖಂಡರು ಇದಕ್ಕಾಗಿ ಮೇ.25ರಂದು ದಿನಾಂಕ ನಿಗದಿ ಮಾಡಿದ್ದಾರೆ.
ಈ ಜಾಗ ಮಸೀದಿಯೋ, ದೇಗುಲವೋ, ಜೈನ ಬಸದಿಯೋ ಎಂಬುದು ಅರಿಯಲು ಹಿಂದೂಪರ ಸಂಘಟನೆಯು ತಾಂಬೂಲ ಪ್ರಶ್ನೆ ಕೇಳಲು ಮುಂದಾಗಿದೆ. ಅಷ್ಟಕ್ಕೂ ಈ ತಾಂಬೂಲ ಪ್ರಶ್ನೆ ಹೇಗೆ ನಡೆಯುತ್ತೆ ಗೊತ್ತಾ?
ಜಾಗದ ಕುರಿತು ಸಮಸ್ಯೆ ಎದುರಾದಾಗ, ಜಾಗದ ಹಿನ್ನೆಲೆ ತಿಳಿಯಲು ದಕ್ಷಿಣ ಕನ್ನಡ ಭಾಗದಲ್ಲಿ ತಾಂಬೂಲ ಪ್ರಶ್ನೆ ಕೇಳುವ ಪದ್ಧತಿ ಇದೆ. ಯಾರು ತಾಂಬೂಲ ಪ್ರಶ್ನೆ ಕೇಳಲು ಕೂರುತ್ತಾರೋ ಅವರಿಗೆ ಒಂದು ಕಟ್ಟು ವೀಳ್ಯದೆಲೆಯನ್ನು ತರಲು ಹೇಳಲಾಗುತ್ತೆ. ಆ ಕಟ್ಟಿನಲ್ಲಿ 12 ಎಲೆಗಳನ್ನು ತೆಗೆಯಲಾಗುತ್ತೆ. ಆ ಎಲೆಯಲ್ಲಿ ಪೂರ್ವಾಪರ ಮಾಹಿತಿ ಗೊತ್ತಾಗುತ್ತೆ ಅನ್ನೋದು ಧಾರ್ಮಿಕ ನಂಬಿಕೆ. ವೀಳ್ಯದೆಲೆಯಲ್ಲಿ ಒಂದು ಪುರುಷಗುಣ, ಮತ್ತೊಂದು ಸ್ತ್ರೀಗುಣ ಇರುತ್ತೆ. ವೀಳ್ಯದೆಲೆ ಮೇಲಿನ ಚುಕ್ಕೆ, ಪದರಗಳನ್ನು ಗಮನಿಸಿ ಫಲಾಫಲವನ್ನ ಹೇಳಲಾಗುತ್ತದೆ. ಪ್ರಶ್ನೆ ಕೇಳುವವರು ಬರುವ ರೀತಿ, ಕೂರುವ ರೀತಿ ಇದೆಲ್ಲವನ್ನೂ ಗಮನಿಸಲಾಗುತ್ತೆ. ಇದರ ಜತೆಗೆ ಕವಡೆ ಹಾಕಲಾಗುತ್ತೆ. ಎರಡರಲ್ಲೂ ಒಂದೇ ಪ್ರಶ್ನೆಯ ಸಾಮ್ಯತೆ ಬರಬೇಕು. ವೀಳ್ಯದೆಲೆ ಒಂದೊಂದು ಭಾಗಕ್ಕೂ ಒಂದೊಂದು ವೈಶಿಷ್ಟ್ಯವಿದೆ.
ತಾಂಬೂಲ ಪ್ರಶ್ನೆ ಇಡಲು ಕೇರಳದ ಪೊದುವಾಳ್ ಅವರನ್ನು ಕರೆಸಲಾಗುತ್ತಿದೆ. ಇದೇ ಸಮಯದಲ್ಲಿ ಮುಂದಿನ ಹೋರಾಟದ ಬಗ್ಗೆ ಪೂರ್ವಸಿದ್ಧತೆ ಸಭೆ ನಡೆದಿದ್ದು, ಸ್ಥಳೀಯ ಶಾಸಕ ಭರತ್ ಶೆಟ್ಟಿ, ವಿ.ಎಚ್.ಪಿ ಮುಖಂಡರ ನೇತೃತ್ವ ವಹಿಸಿದ್ದರು. ಹಿಂದೂ ಸಂಘಟನೆ ಪ್ರಮುಖರು, ಸ್ಥಳೀಯ ಜನ ಪ್ರತಿನಿಧಿಗಳು, ಊರಿನ ಹಿರಿಯರ ಜೊತೆ ಸಭೆ ನಡೆದಿದೆ.