ಫೇಸ್ಬುಕ್ ಮೂಲಕ ಪ್ರೀತಿ, ಸುಂದರಿ ಯುವತಿ ಜೊತೆ ಮದುವೆ ಸಿದ್ಧತೆ ಕೂಡಾ ಮಾಡಿದ ಯುವಕ| ಕೊನೆಗೆ ಬೆಸ್ತು ಬಿದ್ದ | ಕಾರಣ ಇಂಟೆರೆಸ್ಟಿಂಗ್ !!!

ಈಗಿನ ಯುವ ಜನತೆಗೆ ಎಲ್ಲಾ ಫೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್ . ಅದರ ಮೂಲಕನೇ ಪ್ರೀತಿ, ಅದರ ಮೂಲಕನ ಬ್ರೇಕ್ ಅಪ್. ಟೆಕ್ನಾಲಜಿ ನಮ್ಮನ್ನು ಅಷ್ಟೊಂದು ಆವರಿಸಿಕೊಂಡಿದೆ ಎಂದೇ ಹೇಳಬಹುದು. ಈ ಫೇಸ್ಬುಕ್ ಮೂಲಕನೇ ಒಂದು ಪ್ರೀತಿ ಪ್ರೇಮ ಮೂಡಿದೆ. ಕಡೆಗೆ ಮದುವೆ ಸಿದ್ಧತೆನೂ ನಡೆದಿದೆ. ಅನಂತರ ನಡೆದಿದ್ದೇ ಟ್ವಿಸ್ಟ್. ಹುಡುಗ ಬೆಸ್ತು ಬಿದ್ದಿದ್ದಾನೆ. ಯಾಕೆ ಅಂತೀರಾ ? ಬನ್ನಿ ಘಟನೆ ವಿವರ ಈ ಕೆಳಗೆ ನೀಡಲಾಗಿದೆ.

ಫೇಸ್ಬುಕ್ ಮೂಲಕ ಪ್ರೀತಿ, ನಂತರ ಮದುವೆ ಸಿದ್ಧತೆ, ಕೊನೆಗೆ ಫೇಸ್ಬುಕ್ ಮೂಲಕ ಪರಿಚಯವಾದ ಹುಡುಗಿಯನ್ನು ನೋಡಿ ಯುವಕ ಮೂರ್ಛೆ ಹೋಗೋದು ಒಂದು ಬಾಕಿ ಇತ್ತು. ಇಂತಹ ಒಂದು ವಿಚಿತ್ರ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸುಂದರಿಯ ಫೋಟೋ ನೋಡಿ ಫಿದಾ ಆದ ಯುವಕ ಮದುವೆಗೆ ಸಿದ್ಧತೆ ನಡೆಸಿ ಕೊನೆಗೆ ಆಕೆ ಯುವತಿಯಲ್ಲಿ 50 ವರ್ಷದ ಮಹಿಳೆ ಎಂದು ತಿಳಿದು ಕಂಗಾಲಾಗಿ ಬಿಟ್ಟಿದ್ದಾನೆ.

3 ತಿಂಗಳ ಹಿಂದೆ ಕಮಲಾ ಹೆಸರಿನ ಫೇಸ್‌ಬುಕ್ ಮೆಸೆಂಜರ್‌ನಲ್ಲಿದ್ದ ಸುಂದರ ಯುವತಿಯ ಭಾವಚಿತ್ರಕ್ಕೆ ಯುವಕ ಲೈಕ್ ಒತ್ತಿದ್ದಾನೆ. ತಾನು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮಲ್ಲಸಂದ್ರ ಗ್ರಾಮದ ಎಂ.ಆರ್.ಆಶಾ ಆಕೆ ಹೇಳಿಕೊಂಡಿದ್ದಾಳೆ. ನಂತರ ಇಬ್ಬರ ನಡುವೆ ಮಾತುಕತೆ ಶುರುವಾಗಿ ಪ್ರೀತಿಗೆ ತಿರುಗಿದೆ. ಯುವತಿ ತನ್ನ ಕಷ್ಟಹೇಳಿಕೊಂಡು ಯುವಕನಿಂದ 3.50 ಲಕ್ಷ ಪಡೆದಿದ್ದಾಳೆ. .30 ಸಾವಿರ ಮೌಲ್ಯದ ದಿನಸಿ ಸಾಮಗ್ರಿಯನ್ನೂ ತರಿಸಿಕೊಂಡಿದ್ದಾಳೆ. ಈ ನಡುವೆ ಯುವಕ ಮದುವೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ವರಸೆ ಬದಲಿಸಿದ ಆಕೆ, ತಾನು ಆಶಾಳ ದೊಡ್ಡಮ್ಮ ಎಂದಿದ್ದಾಳೆ. ಆಶಾ ತಂದೆ-ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಹಾಗಾಗಿ ಅವಳ ಮದುವೆಯನ್ನು ನಾನೇ ಮಾಡಿಸಬೇಕಿದೆ ಎಂದಿದ್ದಾಳೆ. ಬಳಿಕ ಯುವಕನ ಮನೆಗೆ ಹೋಗಿ ಮದುವೆ ಮಾತುಕತೆ ನಡೆಸಿದ್ದಾಳೆ. ನಿಶ್ಚಿತಾರ್ಥ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ಆಕೆ ಮನೆಯಲ್ಲಿ ಸಾವಾಗಿದೆ. ಚಪ್ಪರ ಶಾಸ್ತ್ರದ ದಿನ ನಿಶ್ಚಿತಾರ್ಥ ಮಾಡುವ ಪ್ರಸ್ತಾಪ ಇಟ್ಟಿದ್ದಾಳೆ. ಇದರಂತೆ ಯುವಕನ ಮನೆಯವರು ಲಗ್ನ ಪತ್ರಿಕೆ ಹಂಚಿ, ಮದುವೆ ಸಿದ್ಧತೆ ನಡೆಸಿದ್ದಾರೆ.

ಮೇ.20ರಂದು ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಮದುವೆಗಾಗಿ ಯುವಕನ ಮನೆಯವರು ಬಂದಿದ್ದಾರೆ. ಆದರೆ ವಧುವಿನ ಕಡೆಯವರು ಆಗಮಿಸಿಲ್ಲ. ಬಳಿಕ ಯುವತಿಯ ದೊಡ್ಡಮ್ಮ ಎಂದು ಹೇಳಿಕೊಂಡಿದ್ದ ಮಹಿಳೆ ಯುವಕನ ಗ್ರಾಮಕ್ಕೆ ಆಗಮಿಸಿ, ತನಗೆ ಹುಷಾರಿರಲಿಲ್ಲ. ಹಾಗಾಗಿ ಯುವತಿಯನ್ನು ಆಕೆಯ ಮಾವಂದಿರು ಬಚ್ಚಿಟ್ಟಿದ್ದಾರೆ ಎಂದು ಕಥೆ ಹೆಣೆದಿದ್ದಾಳೆ. ಇದರಿಂದ ಅನುಮಾನಗೊಂಡ ಯುವಕನ ಮನೆಯವರು ಆಕೆಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದಾಗ ಆಕೆಯ ನಾಟಕ ಬಯಲಾಗಿದೆ.

50 ವರ್ಷದ ಆಕೆ, ಯುವತಿಯಂತೆ ಮಾತನಾಡಿ ಯಾಮಾರಿಸಿದ ಸಂಗತಿ ಬಯಲಾಗಿದೆ. ಬಳಿಕ ಪಡೆದ ಹಣ ವಾಪಸ್ ನೀಡುವುದಾಗಿ ಆಕೆ ಮುಚ್ಚಳಿಕೆ ಬರೆದುಕೊಟ್ಟು ಬಳಿಕ ಪ್ರಕರಣ ಮುಕ್ತಾಯಗೊಂಡಿದೆ.

ಟೆಕ್ನಾಲಜಿ ನಮಗೆ ಉಪಕಾರನೂ ಮಾಡುತ್ತೆ. ಅಪಕಾರನೂ ಮಾಡುತ್ತೆ. ನಾವು ಜಾಗರೂಕರಾಗಿ ವ್ಯವಹರಿಸಿದರೆ ಎಲ್ಲನೂ ಸರಿಯಾದ ರೀತಿಯಲ್ಲೇ ನಡೆಯುತ್ತೆ. ಯುವ ಜನತೆ ಈ ಘಟನೆಯಿಂದಾದರೂ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

Leave A Reply

Your email address will not be published.