ರೈತರಿಗೆ ಭರ್ಜರಿ ಸಿಹಿ ಸುದ್ದಿ : ರಸಗೊಬ್ಬರ ಸಬ್ಸಿಡಿಗೆ 1.10ಲಕ್ಷ ಕೋಟಿ ರೂ. ಹೆಚ್ಚುವರಿ ಹಣ
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಇಳಿಸುವ ಮೂಲಕ ಸಾಮಾನ್ಯ ಜನತೆಗೆ ದಿಲ್ ಖುಷ್ ಆಗುವಂತಹ ಸುದ್ದಿ ನೀಡಿತ್ತು. ಇದರ ಜೊತೆಗೆ ರೈತರಿಗೆ ಸಂತೋಷ ತರುವ ವಿಷಯವನ್ನು ಹಣಕಾಸುವ ಸಚಿವೆ ನಿರ್ಮಲಾ ಸೀತರಾಮನ್ ಘೋಷಣೆ ಮಾಡಿದ್ದಾರೆ.
2022-23 ಸಾಲಿನ ಆಯವ್ಯಯದಲ್ಲಿ ರಸಗೊಬ್ಬರಗಳಿಗೆ ಸಬ್ಸಿಡಿಯಾಗಿ 1,05,222 ಕೋಟಿ ರೂಗಳನ್ನು ಮೀಸಲಿಡಲಾಗಿತ್ತು. ಶನಿವಾರ ಆ ಸಬ್ಸಿಡಿಗೆ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂ ಸೇರಿಸಿರುವುದಾಗಿ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ನಿರ್ಮಲಾ ಸೀತರಾಮನ್, ” ಜಾಗತಿಕವಾಗಿ ರಸಗೊಬ್ಬರಗಳ ಬೆಲೆಗಳು ಏರುತ್ತಿದ್ದರೂ, ನಾವು ನಮ್ಮ ರೈತರನ್ನು ಅಂತಹ ಬೆಲೆ ಏರಿಕೆಯಿಂದ ರಕ್ಷಿಸಿದ್ದೇವೆ. ಬಜೆಟ್‌ನಲ್ಲಿ 1. 05 ಲಕ್ಷ ಕೋಟಿ ರಸಗೊಬ್ಬರ ಸಬ್ಸಿಡಿ ಜೊತೆಗೆ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂ. ಗಳನ್ನು ಸೇರಿಸುವ ಮೂಲಕ ರೈತರನ್ನು ಉಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.