ಸರ್ಕಾರಿ ಆಸ್ತಿ ಮಾರಾಟ : ತಹಶೀಲ್ದಾರ್ ಸೇರಿದಂತೆ ಮೂವರ ಮೇಲೆ ಕ್ರಮ
ಹೊಸಪೇಟೆ : ಸರ್ಕಾರಿ ಆಸ್ತಿಪಾಸ್ತಿಯನ್ನು ಕಾಪಾಡಬೇಕಾದ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು, ಹಣದಾಸೆಗಾಗಿ ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಸಂಗತಿ ವಿಜಯನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು! ಮಲ್ಲಿಗೆ ನಾಡೆಂದೇ ಹೆಸರಾಗಿರುವ ಹೂವಿನ ಹಡಗಲಿ ತಾಲೂಕಿನ ದಾಸರಹಳ್ಳಿಯ ಸ.ನಂಬರ್ ೨೨೯/ಆ/೧ ನ ೧೦.೩೬ ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳು ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಶಿರಸ್ತೇದಾರ್ ಜೊತೆ ಸೇರಿ ಖೊಟ್ಟಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿಯನ್ನೇ ಪರಭಾರೆಗೆ ಯತ್ನ ಮಾಡಿದ ಆರೋಪವಿದೆ.
ಕೂಡಲೇ ವಿಜಯನಗರ ಜಿಲ್ಲಾಡಳಿತ, ಖಾಸಗಿ ವ್ಯಕ್ತಿಗಳ ಜತೆ ಸೇರಿ ಜಮೀನು ಪರಾಭಾರೆ ಮಾಡಲು ಮುಂದಾದ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹೂವಿನ ಹಡಗಲಿಯ ಗ್ರೇಡ್ -೦೨ ತಹಸೀಲ್ದಾರ್ ನಟರಾಜ್, ಶಿರೇಸ್ತೇದಾರ, ಮಹಮ್ಮದ್ ಗೌಸ್, ಎಫ್‌ಡಿಎ ಪುನೀತ್ ಕುಮಾರ್, ಮತ್ತೊಬ್ಬ ಸಿಬ್ಬಂದಿ ಕೊಟ್ರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸರ್ಕಾರಿ ದಾಖಲೆಗಳನ್ನು ತಿರುಚುವ ಸಾಧ್ಯತೆ ಇದೆ ಎಂಬ ಅನುಮಾನದಿಂದ ಗ್ರೇಡ್- ೨ ತಹಶೀಲ್ದಾರ್ ಸೇರಿ ಇಬ್ಬರು ಅಧಿಕಾರಿಗಳನ್ನು ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಬಿಡುಗಡೆ ಮಾಡಿದ್ದಾರೆ. ಉಳಿದಿಬ್ಬರು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಡಿಸಿ ಅನಿರುದ್ಧ್ ಶ್ರವಣ್ ಆದೇಶ ಮಾಡಿದ್ದಾರೆ. ಈ ಮೂಲಕ ಭೂಗಳ್ಳರ ಜತೆ ಸೇರಿದ್ದ ಅಧಿಕಾರಿಗಳಿಗೆ ಡಿಸಿ ಚಾಟಿ ಬೀಸಿದ್ದಾರೆ.
ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಸ್ವತಃ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಖುದ್ದು ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಜ್ಜಾಗಿದ್ದರು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಕಾರ್ಯ ನಿರ್ವಹಣೆ ಮಾಡಬೇಕಾದ ಈ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಭೂಗಳ್ಳರ ಜೊತೆ ಸೇರಿ ಸರ್ಕಾರಿ ಜಮೀನನ್ನು ಕಬಳಿಸೋಕೆ ಹುನ್ನಾರ ನಡೆಸಿರುವುದು ಬೇಲಿ ಎದ್ದು ಹೊಲ ಮೇದಂತಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಶಿರಸ್ತೇದಾರ್ ಖೊಟ್ಟಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿಯನ್ನೇ ಪರಾಭಾರೆಗೆ ಯತ್ನ ನಡೆಸಿದ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಕುರಿತಂತೆ ಹೂವಿನ ಹಡಗಲಿಯ ಗ್ರೇಡ್ -೦೨ ತಹಸೀಲ್ದಾರ್ ನಟರಾಜ್, ಶಿರೇಸ್ತೇದಾರ, ಮಹಮ್ಮದ್ ಗೌಸ್, ಎಫ್‌ಡಿಎ ಪುನೀತ್ ಕುಮಾರ್, ಮತ್ತೊಬ್ಬ ಸಿಬ್ಬಂದಿ ಕೊಟ್ರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಗ್ರೇಡ್- ೨ ತಹಸೀಲ್ದಾರ್ ಸೇರಿ ಇಬ್ಬರು ಅಧಿಕಾರಿಗಳನ್ನು ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಬಿಡುಗಡೆ ಮಾಡಲಾಗಿದೆ. ಉಳಿದಿಬ್ಬರು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.