ಮಂಗಳೂರು : “ಕೋಳಿ ಅಂಕ” ದಲ್ಲಿ ಹುಂಜದ ಕಾಲಿಗೆ ಕಟ್ಟಿದ್ದ ‘ಬಾಲ್’ ತಾಗಿ ವ್ಯಕ್ತಿಯೋರ್ವ ಆಸ್ಪತ್ರೆಗೆ ದಾಖಲು| ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಕೋಳಿ ಅಂಕದಲ್ಲಿ ಹುಂಜದ ಕಾಲಿಗೆ ಕಟ್ಟಿದ್ದ ಬಾಲ್ (ಸಣ್ಣ ಚೂರಿ) ಅಂಕ ನೋಡಲು ಬಂದ ವ್ಯಕ್ತಿಗೆ ತಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡವರನ್ನು ಚಂದ್ರಹಾಸ ಎಂದು
ಗುರುತಿಸಲಾಗಿದೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಗ್ರಾಮದ ಖಂಡಿಗೆ ಎಂಬಲ್ಲಿ ಶ್ರೀ ಧರ್ಮಅರಸು ಉಳ್ಳಾಯ್ಯ ದೈವಸ್ಥಾನದ ವಾರ್ಷಿಕ ಜಾತ್ರೆ ಮೇ.17 ರಂದು ಸಂಜೆ 4:30 ಗಂಟೆಗೆ ನಡೆದಿತ್ತು. ಅದರ ಪ್ರಯುಕ್ತ ದೈವಸ್ಥಾನದ ಹಿಂಬದಿ ಗದ್ದೆಯಲ್ಲಿ ದೇವು ಯಾನೆ ದೇವದಾಸ್ ಮುಂಚೂರು ಹಾಗೂ ಹರೀಶ ಎಂಬವರು ಕೋಳಿಗಳ ಕಾಲಿಗೆ ಬಾಲ್ ಅನ್ನು ಕಟ್ಟಿ ಕಾದಡಲು ಬಿಟ್ಟಿದ್ದರು.

ಈ ವೇಳೆ ಕಲ (ಕಾದಾಡುವ ಸ್ಥಳ) ದಿಂದ ಹಾರಿ ಓಡಿಹೋಗಲು ಯತ್ನಿಸಿದ ಹುಂಜವೊಂದು ಕೋಳಿ ಅಂಕ ವೀಕ್ಷಿಸಲು ಬಂದಿದ್ದ ಚಂದ್ರಹಾಸ ಎಂಬವರ ಬಲಕಾಲಿಗೆ ಬಾಲ್‌ನಿಂದ ತಿವಿದು ಬಿಟ್ಟಿದ್ದು, ತೀವ್ರ ರಕ್ತಸ್ರಾವವಾಗಿದೆ.

ಗಂಭೀರ ಗಾಯಗೊಂಡ ಚಂದ್ರಹಾಸ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.