ಕಡಬ: ಧರ್ಮಸ್ಥಳ ಯೋಜನೆಯ ಕಡಬ ತಾಲೂಕಿನ ಕಾರ್ಯಕರ್ತರ ಪ್ರೇರಣೆ ಹಾಗೂ ಅಭಿನಂದನಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ತಾಲೂಕಿನಲ್ಲಿ 2021-22ನೇ ಸಾಲಿನ ಸಾಧಕ ಕಾರ್ಯಕರ್ತರ ಅಭಿನಂದನೆ ಹಾಗೂ ಪ್ರೇರಣಾ ಕಾರ್ಯಗಾರವನ್ನು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ನಿರ್ಧೇಶಕರಾದ ವಸಂತ್ ಸಾಲಿಯಾನ್ ರವರು  ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃಧ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವ್ಶಾಪ್ತಿಯ ನಲುವತ್ತೈದು ಯೋಜನಾಕಛೇರಿಗಳಲ್ಲಿ ಅತೀ ಸಣ್ಣ ಯೋಜನಾ ವ್ಶಾಪ್ತಿ ಹೊಂದಿರುವ ಕಡಬ ಯೋಜನಾಕಛೇರಿಯು 2021-22ನೇ ಸಾಲಿನ ಯೋಜನೆಯ ಗುರಿ ಸಾಧನೆಯಲ್ಲಿ ಪ್ರಾದೇಶೀಕ ವ್ಶಾಪ್ತಿಯಲ್ಲಿ ದ್ವೀತೀಯ ಸ್ಥಾನ ಪಡೆದಿರುವುದು ತಾಲೂಕಿಗೆ ಹೆಮ್ಮೇತರುವಂತಾಗಿದೆ.

ತಾಲೂಕಿನ ಸಾಧನೆಗೆ ಸಹಕಾರ ನೀಡಿದ ಒಕ್ಕೂಟದ ಪಧಾಧಿಕಾರಿಗಳು ಊರಿನ ಗಣ್ಶ ವ್ಶಕ್ತಿಗಳು ಜನಪ್ರತಿನಿಧಿಗಳು ˌ ˌಶ್ರಮವಹಿಸಿದ ಸೇವಾಪ್ರತಿನಿಧಿಗಳು ಹಾಗೂ ತಾಲೂಕಿನ ಎಲ್ಲಾ ಸಿಬ್ಬಂಧಿವರ್ಗದವರು ಪ್ರಸಂಶನೆಗೆ ಅರ್ಹರಾಗಿರುತ್ತಾರೆ.
ಸಾಧನೆ ಮಾಡಿರುವ ಎಲ್ಲಾ ಸಿಬ್ಬಂಧಿಗಳಲ್ಲಿ ಅತ್ಶೂನ್ನತ ಸಾಧನೆ ಯನ್ನು ಗುರುತಿಸಿ ಅಭಿನಂದನೆಯ ಜೊತೆಗೆ ಬಹುಮಾನ ನೀಡಿರುವುದು ಉಳಿದ ಸಿಬ್ಬಂಧಿಗಳಿಗೆ ಮುಂದಿನ ಸಾಧನೆಗೆ ಪ್ರೇರಣೆಯಾಗಲಿದೆ. ಮುಂದಿನ ಆರ್ಥಿಕ ವರ್ಷ 2022-23ನೇ ಸಾಲಿನಲ್ಲಿಯೂ ಅತ್ಶುನ್ನತ ಸ್ಥಾನವನ್ನು ಕಡಬ ಯೋಜನಾಕಛೇರಿಯು ಗಳಿಸಲಿ ಎಂದು ಶುಭಹಾರೈಸಿದರು.

 

ಜಿಲ್ಲಾ ನಿರ್ಧೇಶಕರಾದ ಪ್ರವೀಣ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಡಬ ಯೋಜನಾಕಛೇರಿಯು ಪ್ರಾದೇಶೀಕ ಮಟ್ಟದಲ್ಲಿ ದ್ವೀತೀಯ ಸ್ಥಾನ ಪಡೆದಿರುವುದು ಜಿಲ್ಲೆಗೂ ಹೆಮ್ಮೆತಂದಿದೆ. ಮುಂದಿನ ವರ್ಷದಲ್ಲಿ ರಾಜ್ಶಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಶುಭಹಾರೈಸಿದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಯನ್ ಸ್ವಾಗತಿಸಿ ಧನ್ಶವಾದವಿತ್ತರು ನೆಲ್ಶಾಡಿ ವಲಯ ಮೇಲ್ವೀಚಾರಕ ವಿಜೇಶ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಾಲೂಕಿನ ಆರು ವಲಯಗಳಲ್ಲಿ ಪ್ರಥಮ ಸ್ಥಾನವನ್ನು ನೆಲ್ಶಾಡಿ ವಲಯದ ಮೇಲ್ವೀಚಾರಕ ವಿಜೇಶ್ ಜೈನ್ ಹಾಗೂ ದ್ವೀತಿಯ ಸ್ಥಾನವನ್ನು ಕಡಬ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಪಡೆದುಕೊಂಡರು.

ತಾಲೂಕಿನ 62ಸೇವಾಪ್ರತಿನಿಧಿಗಳಲ್ಲಿ ಪ್ರಥಮ ಸ್ಥಾನವನ್ನು ಕಡಬ ವಲಯದ ದೊಡ್ಡ ಕೊಪ್ಪ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ನಳಿನಿ ಯವರು ಹಾಗೂ ದ್ವೀತಿಯ ಸ್ಥಾನವನ್ನು ಕಡಬ ವಲಯದ ಅಡ್ಡಗದ್ದೆ ಕಾರ್ಯಕ್ಷೇತ್ರದ ಸವಿತಾರವರು ಪಡೆದುಕೊಂಡರು. ಹಸಿರು ಇಂದನ ಕಾರ್ಯಕ್ರಮದನ್ವಯ ಸೋಲಾರ್ ಅಳವಡಿಕೆ ಹಾಗೂ ಕುಕ್ ಸ್ಟವ್ ಅಳವಡಿಕೆಯಲ್ಲಿ ಸಾಧನೆಗೈದವರಿಗೆ ಸಂಸ್ಥೆಯ ವತಿಯಿಂದ ಬಹುಮಾನ ವಿತರಿಸಿ ಶುಭಹಾರೈಸಲಾಯಿತು.

Leave A Reply

Your email address will not be published.